ನವದೆಹಲಿ : ಇತೀಚಿನ ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯು ಏರುಗತಿಯಲ್ಲಿ ಸಾಗುತ್ತಿದೆ. ನಾವಿನ್ನೂ ಕೊರೊನಾದಿಂದ ಮುಕ್ತಗೊಂಡಿಲ್ಲ, ಇನ್ನೂ ಸಹ ವಿಶ್ವದ 110 ದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಲೇ ಇದೆ ನಾವಿನ್ನೂಮುಕ್ತಗೊಂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಜನತೆಗೆ ಎಚ್ಚರಿಕೆಯನ್ನು ನೀಡಿದೆ.
ಓಮಿಕ್ರಾನ್ ಒಪ-ರೂಪಾಂತರಿ ವೈರಸ್ ಗಳು ವೇಗಗತಿಯಲ್ಲಿ ಹರಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಇನ್ನೂ ಶೇಕಡಾ 20 ರಷ್ಟೂ ಹೆಚ್ಚಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೊಸ್ ಆಡನಮ್ ಹೇಳಿದ್ದಾರೆ.
ವೈರಸ್ ಅನ್ನು ಟ್ರ್ಯಾಕ್ ಮಾಡುವ ನಮ್ಮ ಸಾಮರ್ಥ್ಯವು ಕ್ಷೀಣಿಸುತ್ತಿದೆ. ಮನುಷ್ಯರ ಆರೋಗ್ಯವೂ ಜೀನೋಮಿಕ್ ಅನುಕ್ರಮಗಳಿಂದ ಅಪಾಯದಲ್ಲಿದೆ. ಇದರರ್ಥ ಓಮಿಕ್ರಾನ್ ಅನ್ನು ಟ್ರ್ಯಾಕ್ ಮಾಡುವುದು ಮತ್ತು ಭವಿಷ್ಯದ ರೂಪಾಂತರಗಳನ್ನು ವಿಶ್ಲೇಷಿಸುವುದು ಕಷ್ಟ ಎಂದಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮುಂದುವರಿದು ಕಳೆದ 18 ತಿಂಗಳುಗಳಲ್ಲಿ, ಜಾಗತಿಕವಾಗಿ 12 ಶತಕೋಟಿಗೂ ಹೆಚ್ಚು ಲಸಿಕೆಗಳನ್ನು ವಿತರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ವೃದ್ಧರು ಸೇರಿದಂತೆ ಹಿಂದುಳಿದ ದೇಶಗಳಲ್ಲಿ ಲಕ್ಷಾಂತರ ಜನರಿಗೆ ಲಸಿಕೆ ನೀಡಲಾಗಿಲ್ಲ. ಇದರರ್ಥ ಮುಂದಿನ ದಿನಗಳಲ್ಲಿ ವೈರಸ್ ಇಂಥವರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ಹಾಕಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸದ್ಯ ವೇಗಗತಿಯಲ್ಲಿ ಹರಡುತ್ತಿರುವ ಓಮಿಕ್ರಾನ್ ಉಪ-ವ್ಯತ್ಯಯಗಳಾದ BA.4 ಮತ್ತು BA.5 ಒಟ್ಟಾಗಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಅರ್ಧದಷ್ಟು ಕೊರೊನಾವೈರಸ್ ಪ್ರಕರಣಗಳನ್ನು ಮಾಡುತ್ತವೆ ಎಂದು ಅಂದಾಜಿಸಲಾಗಿದೆ. ಜೂನ್ 25 ರ ಹೊತ್ತಿಗೆ, US ನಲ್ಲಿನ ಒಟ್ಟು ಕೊರೊನಾವೈರಸ್ ಪ್ರಕರಣಗಳಲ್ಲಿ BA.5 ಶೇಕಡಾ 36.6 ರಷ್ಟಿದ್ದರೆ, BA.4 ಶೇಕಡಾ 15.7 ರಷ್ಟಿದೆ, ಒಟ್ಟಾರೆಯಾಗಿ US ನಲ್ಲಿ ಸುಮಾರು 52 ಶೇಕಡಾ ಹೊಸ ಪ್ರಕರಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ ಎಂದು ವರದಿಯಾಗಿದೆ.