ಮಂಡ್ಯ: ಆಸ್ಪತ್ರೆಗಳಿಗೆ ಅಲೆದು ಆಕ್ಸಿಜನ್ ಬೆಡ್ ಸಿಗದೆ ಸೋಂಕಿತ ಸಾವು

ಮಂಡ್ಯ: ಕೊರೊನಾ ಸೋಂಕಿತ ವ್ಯಕ್ತಿಗೆ ಸೂಕ್ತ ಸಮಯಕ್ಕೆ ಆಮ್ಲಜನಕ ಬೆಡ್ ಸಿಗದೆ ನರಳಾಡಿ ಮೃತಪಟ್ಟಿರುವ ಘಟನೆ ನಾಗಮಂಗಲ ಪಟ್ಟಣದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ.

ಮಂಡ್ಯದ ಶ್ರೀರಾಮನಗರದ ನಿವಾಸಿ ಧನಂಜಯ(೪೨) ಮೃತರು. ಇವರಿಗೆ ಏ.೨೭ರಂದು ಸೋಂಕು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಪಡೆದು ಹೋಂ ಐಸೊಲೇಷನ್‌ನಲ್ಲಿದ್ದರು. ೨ ದಿನ ಆರಾಮವಾಗಿದ್ದ ಇವರಿಗೆ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗಳ ಅಲೆದಾಟದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಸೋಮವಾರ ಮೃತಪಟ್ಟಿದ್ದಾರೆ.

× Chat with us