ಮೈಸೂರು: ಆಸ್ಪತ್ರೆ ಶೌಚಾಲಯದಲ್ಲೇ ಕೋವಿಡ್‌ ಸೋಂಕಿತ ನೇಣಿಗೆ ಶರಣು!

ಮೈಸೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್‌ ಸೋಂಕಿತನೊಬ್ಬ ಆಕ್ಸಿಜನ್‌ ಒದಗಿಸುವ ಪೈಪ್‌ನಿಂದಲೇ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉದಯಗಿರಿ ನಿವಾಸಿ ದೇವರಾಜ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ನಗರದ ಟ್ರಾಮಾ ಕೇರ್‌ ಸೆಂಟರ್‌ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

× Chat with us