700 ಕಿ.ಮೀ. ದೂರದ ತವರಿಗೆ ವಿಶೇಷಚೇತನನನ್ನು ಕಳುಹಿಸಿಕೊಟ್ಟ ನಂಜನಗೂಡು ತಹಸಿಲ್ದಾರ್

ಮೈಸೂರು: ಕೋವಿಡ್‌ ಲಾಕ್‌ಡೌನ್‌ ಪರಿಣಾಮವಾಗಿ ಬೇರೆ ಊರಿನಲ್ಲಿ ಲಾಕ್‌ ಆಗಿದ್ದ, ವಿಶೇಷಚೇತನರೊಬ್ಬರನ್ನು 700 ಕಿ.ಮೀ. ದೂರದ ಅವರ ತವರಿಗೆ ಕಳುಹಿಸುವ ಮೂಲಕ ತಹಸಿಲ್ದಾರ್‌ರು ಮಾನವೀಯತೆ ಮೆರೆದಿದ್ದಾರೆ.

ಲಾಕ್‌ಡೌನ್‌ನಿಂದಾಗಿ ವಿಶೇಷಚೇತನ ನೀಲಕಂಠ ಎಂಬವರು ನಂಜನಗೂಡು ತಾಲ್ಲೂಕಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ತನ್ನೂರಿಗೆ ಕಳುಹಿಸಿಕೊಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ್ದರು. ವಿಶೇಷಚೇತನರ ಮನವಿಗೆ ಸ್ಪಂದಿಸಿದ ತಹಸಿಲ್ದಾರ್‌ ಮೋಹನ್‌ ಕುಮಾರಿ ಅವರು ಸುಮಾರು 700 ಕಿ.ಮೀ. ದೂರದಲ್ಲಿರುವ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿಗೆ ಆತನನ್ನು ಕಳುಹಿಸಿಕೊಟ್ಟಿದ್ದಾರೆ.

ಮೀರಾ ಕಂಪನಿ ಸಹಾಯದಿಂದ ಕಾರೊಂದನ್ನು ಬುಕ್ ಮಾಡಿ ತಹಸಿಲ್ದಾರ್‌ ಮಸ್ಕಿಗೆ ಈ ವಿಶೇಷಚೇತನ ವ್ಯಕ್ತಿಯನ್ನು ಕಳುಹಿಸಿಕೊಟ್ಟಿದ್ದಾರೆ.

× Chat with us