ಕೋವಿಡ್: ಪತಿ ಅಂತ್ಯಕ್ರಿಯೆ ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಪತ್ನಿಯೂ ಸಾವು

ಚಾಮರಾಜನಗರ: ಕೋವಿಡ್‌ನಿಂದ ಸಾವಿಗೀಡಾದ ಪತಿಯ ಅಂತ್ಯಕ್ರಿಯೆ ನಡೆಸಿ ಬರುವಷ್ಟರಲ್ಲೇ ಸೋಂಕಿತರಾದ ಪತ್ನಿಯೂ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಪಟ್ಟಣದ ನಾಗರತ್ಮಮ್ಮ ಬಡಾವಣೆತ ಸುದರ್ಶನ್ (೫೧), ಹೇಮಲತಾ (೪೫) ಮೃತ ದಂಪತಿ. ಇಬ್ಬರಿಗೂ ಕೋವಿಡ್‌ ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆಗೆ ಗುಂಡ್ಲುಪೇಟೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸೋಮವಾರ ಬೆಳಿಗ್ಗೆ ಪತಿ ಸುದರ್ಶನ್‌ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಮುಗಿದ ಬಳಿಕ ಪತ್ನಿ ಹೇಮಲತಾ ಅವರೂ ನಿಧನರಾಗಿದ್ದಾರೆ.

× Chat with us