ದೇಶದಲ್ಲಿ 7ಸಾವಿರದ ಗಡಿಗೆ ಬಂದ ಕೋವಿಡ್-19 ಪ್ರಕರಣ

ನವದೆಹಲಿ: ವಿಶ್ದದ ಹಲವು ರಾಷ್ಟ್ರಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಮತ್ತೆ ವ್ಯಾಪಿಸುತ್ತಿದ್ದು, ಕೆಲವು ರಾಷ್ಟ್ರಗಳು ಲಾಕ್‌ಡೌನ್ ಘೋಷಿಸಿವೆ. ಈ ನಡುವೆ ಮೂರನೇ ಅಲೆಯ ಆತಂಕದ ನಡುವೆಯೂ ಭಾರತದಲ್ಲಿ ಸಮಾಧಾನಕರ ಸಂಗತಿ ಎಂದರೆ ಸೋಂಕಿತರ ಪ್ರಮಾಣ ಸದ್ಯದ ಮಟ್ಟಿಗೆ ಇಳಿಮುಖದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ದೈನಂದಿನ ಸೋಂಕಿನ ಪ್ರಮಾಣ ವರದಿಯಾಗಿದೆ.

ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 7,579 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 236 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 12,202 ಮಂದಿ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ ಎಂಬುದು ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಸದ್ಯ ದೇಶದಲ್ಲಿ 1,13,584 ಸಕ್ರಿಯ ಪ್ರಕರಣಗಳಿದ್ದು, ಇದು 536 ದಿನಗಳಲ್ಲೇ ಅತಿ ಕಡಿಮೆ ಆಗಿದೆ.

ಇನ್ನು ಭಾರತದಲ್ಲಿ ಒಂದೇ ದಿನ 9,64,980 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೆ ಒಟ್ಟು 63,34,89,239 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 117,63,73,499 ಜನರಿಗೆ ಲಸಿಕೆಯನ್ನು ನೀಡಲಾಗಿದೆ.

ಒಟ್ಟು ಪ್ರಕರಣ 3,75,26,480
ಗುಣಮುಖ 3,39,46,749
ಸಕ್ರಿಯ ಪ್ರಕರಣ 1,13,584
ಮೃತಪಟ್ಟವರು 4,66,176

× Chat with us