ಶಾಸಕ ರಾಮದಾಸ್‌ಗೆ ಸಂಕಷ್ಟ ತಂದ ಕೋರ್ಟ್ ಆದೇಶ

ಮೈಸೂರು: ಶಾಸಕ ಎಸ್‌.ಎ.ರಾಮದಾಸ್‌ ವಿರುದ್ಧ ಸಾಮಾಜಿಕ ಹೋರಾಟಗಾರರೊಬ್ಬರು ಸಲ್ಲಿಸಿರುವ ದೂರಿನ ಪ್ರಕರಣದ ತನಿಖೆ ನಡೆಸುವಂತೆ ಮೈಸೂರು ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕಪುರಂ ಪೊಲೀಸರು ಸಲ್ಲಿಸಿದ್ದ ʻಬಿʼ ಅಂತಿಮ ರಿಪೋರ್ಟ್ ಅನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ನೋಟೀಸ್ ಜಾರಿ ಮಾಡುವಂತೆ ಆದೇಶಿಸಿದೆ. ಅಲ್ಲದೇ, ರಾಮದಾಸ್‌ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ದೂರನ್ನು ಪರಿಗಣಿಸಿ ತನಿಖೆಗೆ ಆದೇಶ ಹೊರಡಿಸಿದೆ.

ಸ್ನೇಹಮಯಿ ಕೃಷ್ಣ 2019ರಲ್ಲಿ ಶಾಸಕ ರಾಮದಾಸ್ ವಿರುದ್ಧ ಕೋರ್ಟ್‌ಗೆ ದೂರು ಸಲ್ಲಿಸಿದ್ದರು.

× Chat with us