ಮೈಸೂರಲ್ಲಿ ಗುಣಮುಖರಾದವರು 51, ಚಿಕಿತ್ಸೆ ಪಡೆಯುತ್ತಿರುವವರು 38

ಮೈಸೂರಿನಲ್ಲಿ ಇಂದು ಏಳು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಗುಣಮುಖರಾಗಿ ಬಿಡುಗಡೆ ಒಟ್ಟು ಸಂಖ್ಯೆ 51 ಮಂದಿ. ಸದ್ಯ ಚಿಕಿತ್ಸೆ ಪಡೆಯುತ್ತಿರುವವರು 38 ಮಂದಿಯಷ್ಟೇ. ಇವತ್ತೂ ಕೂಡಾ ಮೈಸೂರು ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ.

ಆಂದೋಲನ ಈ-ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಇಂದು 11 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಕಲಬುರಗಿ ಜಿಲ್ಲೆಯವರೇ ಹೆಚ್ಚು. ರಾಜ್ಯದಲ್ಲಿ ಇದುವರೆಗೆ 523 ಮಂದಿಗೆ ಸೋಂಕು ತಗುಲಿದ್ದರೆ, 207 ಮಂದಿ ಗುಣಮುಖರಾಗಿದ್ದಾರೆ. 20 ಮಂದಿ ಕೊರೊನಾಗೆ ಬಲಿಯಾಗಿದ್ದರೆ, ಒಬ್ಬ ಕೊರೊನಾ ಸೋಂಕಿತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ 295 ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದು ಇದರಲ್ಲಿ 7 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಮೇ 3ರ ನಂತರ ಲಾಕ್ ಡೌನ್ ತೆರವಾಗುತ್ತಾ ?

× Chat with us