ಕೊಡಗಾಪುರ ಗ್ರಾಮದ ಸರ್ಕಾರಿ ಶಾಲೆಯ ಇಬ್ಬರು ಮಕ್ಕಳಿಗೆ ಕರೋನಾ ಪಾಸಿಟಿವ್

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದ ಸರ್ಕಾರಿ ಶಾಲೆಯ ಇಬ್ಬರು ಮಕ್ಕಳಿಗೆ ಕರೋನಾ ಪಾಸಿಟಿವ್ ದೃಢ ಹಿನ್ನೆಲೆ ಶಾಲೆಯ ಎಲ್ಲಾ ಮಕ್ಕಳನ್ನ ಸ್ವಾಬ್ ಪರೀಕ್ಷೆಗೆ ಒಳಪಡಿಸಿ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.

ಕಬ್ಬಹಳ್ಳಿ ಹಿರಿಯಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರೊಬ್ಬರಿಗೆ ಕರೋನಾ ಸೋಂಕು ದೃಢಪಟ್ಟಿದ್ದ ಬೆನ್ನಲ್ಲೇ ಕೊಡಗಾಪುರ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವರ ಇಬ್ಬರು ಮಕ್ಕಳಿಗೂ ಸಹ ಕರೋನಾ ಪಾಸಿಟಿವ್ ದೃಢಪಟ್ಟಿದೆ , ಈ ಹಿನ್ನೆಲೆಯಲ್ಲಿ ಕೊಡಗಾಪುರ ಶಾಲೆಯ 70 ಮಕ್ಕಳಿಗೂ ಸ್ವಾಬ್ ಪರೀಕ್ಷೆ ನಡೆಸಲಾಗಿದ್ದು ವರದಿ ಬರುವ ತನಕ ಎರಡು ದಿನಗಳ ರಜೆ ಘೋಷಣೆ ಮಾಡಲಾಗಿದೆ.

ಕಬ್ಬಹಳ್ಳಿ ಶಾಲೆಯ 165 ಮಕ್ಕಳಿಗೂ ಪರೀಕ್ಷೆ ಮಾಡಲಾಗಿದ್ದು ವರದಿ ಬರುವತನಕ ಎರಡು ದಿನ ರಜೆ ಘೋಷಣೆಯಾಗಿದೆ. ಶಾಲೆಯ ಕೊಠಡಿ ಮತ್ತು ಆವರಣದಲ್ಲಿ ಔಷಧ ಸಿಂಪಡಣೆ ಮಾಡಲಾಗಿದೆ.

× Chat with us