BREAKING NEWS

ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟ ಆಗಲಿದೆ : ಆರ್‌ ಅಶೋಕ್‌ ಆಕ್ರೋಶ

ರಾಮನಗರ : ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಆರೋಪಿಸಿರುವ ಸಚಿವ ಆರ್. ಅಶೋಕ, ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿಯಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಅವರು ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದ್ದೀರಿ. ಇದು ಇಡೀ ಕಾಂಗ್ರೆಸನ್ನೇ ಸುಟ್ಟು ಸರ್ವನಾಶ ಮಾಡುತ್ತದೆ ಎಂದು ಹೇಳಿದ್ದಾರೆ.

ಕನಕಪುರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಬಜರಂಗದಳ ಬ್ಯಾನ್ ವಿಚಾರವನ್ನು ಖಂಡಿಸಿದರು. ಬಜರಂಗದಳ ಬ್ಯಾನ್ ವಿಚಾರದಿಂದ ಕಾಂಗ್ರೆಸ್ ಇನ್ನಷ್ಟು ಸ್ಥಾನ ಕಳೆದುಕೊಳ್ತಾರೆ. ಹಿಂದೂ ರಕ್ಷಣೆ ಮಾಡುವವವರು ಬಜರಂಗದಳದವರು. ದೇಶ, ದೇವಸ್ಥಾನಗಳನ್ನು ರಕ್ಷಣೆ ಮಾಡೋದು ಬಜರಂಗದಳ. ಕಾಂಗ್ರೆಸ್ ಅವರು ಬಜರಂಗದಳವನ್ನು ಪಿಎಫ್ಐಗೆ ಹೋಲಿಸುವುದನ್ನು ನಾನು ಖಂಡಿಸುತ್ತೇನೆ ಎಂದರು.

ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಕುಂಕುಮವನ್ನು ವಿರೋಧ ಮಾಡ್ತಾರೆ. ಟಿಪ್ಪು ಸುಲ್ತಾನ್ ಅವರನ್ನು ಹೊಗಳುತ್ತಾರೆ. ಹಿಂದೂ ವಿರೋಧಿ ಭಾವನೆಯನ್ನು ಕಾಂಗ್ರೆಸ್ ತೋರಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ. ಇದೇ ಕಾರಣಕ್ಕೆ ಎಲ್ಲಾ ಕಡೆ ಹನುಮಾನ್ ಚಾಲಿಸಾ ಪಠಣೆ ಮಾಡಲಾಗುತ್ತದೆ. ಕಾಂಗ್ರೇಸ್ ದೇಶದಲ್ಲಿ ಸರ್ವನಾಶವಾಗುತ್ತದೆ. ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ‌. ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಕಾಂಗ್ರೆಸ್ ಗೆ ವ್ಯತಿರಿಕ್ತವಾಗುತ್ತದೆ‌. ಇದೆಲ್ಲವನ್ನೂ ನೋಡಿದ್ರೆ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನುವುದು ಗೊತ್ತಾಗುತ್ತದೆ ಎಂದರು.

ನಾನೂ ಬಜರಂಗದಳ, ಬನ್ನಿ ನಮ್ಮ ಮನೆ ಹತ್ತಿರ : ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಸಚಿವ ಆರ್.ಅಶೋಕ್ ಅವರು “ನಾನು ಕೂಡ ಬಜರಂಗದಳ. ನೋಡೊಣ ಬನ್ನಿ ನಮ್ಮ ಮನೆ ಹತ್ತಿರ. ಬಂದು ಏನು ಮಾಡ್ತೀರಿ ನೋಡೊಣ” ಎಂದು ಬಹಿರಂಗ ಸವಾಲ್ ಹಾಕಿದರು. ಎಲ್ಲರೂ ಕೂಡ ಆರ್.ಎಸ್.ಎಸ್ ಬಜರಂಗದಳದಿಂದಲೇ ಬಂದಿರೋದು. ನಿಮಗೆ ತಾಕತ್ತು, ಧಮ್ ಇದೆಯಾ ಬ್ಯಾನ್ ಮಾಡೋಕೆ? ಪಾಕಿಸ್ತಾನಕ್ಕೆ ಜೈ ಅನ್ನೋ ಸಂಸ್ಕಾರ ನಮ್ಮದಲ್ಲ. ಕಾಂಗ್ರೆಸ್ ಅವರು ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟಿದ್ದೀರಿ. ಇದು ಇಡೀ ಕಾಂಗ್ರೆಸನ್ನೇ ಸುಟ್ಟು ಸರ್ವನಾಶ ಮಾಡುತ್ತೆ‌ ಎಂದರು.‌

ಕನಕಪುರದಲ್ಲಿ‌ಮುನೇಶ್ವರ ಬೆಟ್ಟವನ್ನು ಯೇಸು ಶಿಲುಬೆ ಮಾಡೋಕೆ ಹೊರಟಿದ್ರಿ. ಇದೀಗ ಆಂಜನೇಯನ ಸುದ್ದಿಗೆ ಬಂದಿದ್ದೀರಿ. ಮುಂದಿನ ದಿನಗಳಲ್ಲಿ ಮಹಿಳೆಯರು ಕುಂಕುಮ ಇಡೋದಕ್ಕೂ ಬಿಡೊಲ್ಲ. ಈಗಾಗಲೇ ಇದಕ್ಕೆಲ್ಲಾ ಸಿದ್ದರಾಮಯ್ಯ ಅವರು ವಿರೋಧ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷದ ಹಾವು ಎಂದಿದ್ದಾರೆ. ಒಬ್ಬ ಪ್ರಧಾನಿ ಬಗ್ಗೆ ಮಾತನಾಡಬೇಕಾದರೆ ಯೋಚನೆ ಮಾಡಬೇಕು. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬಾರದು‌. ವಿಷವನ್ನು ನೆಕ್ಕಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ‌. ಯಾರಾದರೂ ಕೂಡ ವಿಷವನ್ನು ನೆಕ್ಕುತ್ತಾರಾ ಹೇಳಿ? ಈ ಎಲ್ಲಾ ಕಾಂಗ್ರೇಸ್ ನಾಯಕರ ಹೇಳಿಕೆಯಿಂದ ಕಾಂಗ್ರೆಸ್ ಅದೋಗತಿಗೆ ಬಂದಿದೆ. ದೇಶದಲ್ಲಿ ಕಾಂಗ್ರೇಸ್ ತೊಲಗಿದೆ. ಕಾಂಗ್ರೇಸ್ ಮುಕ್ತ ಭಾರತ ಆಗಲಿದೆ ಎಂದರು.

lokesh

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

1 hour ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

2 hours ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

2 hours ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

2 hours ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago