ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್‌ ಮಾಲ್‌ನಂತೆ: ಕಾಂಗ್ರೆಸ್‌ ಟೀಕೆ

ಬೆಂಗಳೂರು: ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್​ನಂತೆ ಎಂದು ಟ್ವೀಟ್‌ ಮಾಡಿ ಕಾಂಗ್ರೆಸ್‌ ಹರಿಹಾಯ್ದಿದೆ.

ಉಪ ಚುನಾವಣೆ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ʻಬಿಜೆಪಿಯು ಹಣದಿಂದ ಶಾಸಕರು ಮತ್ತು ಮತಗಳನ್ನು ಖರೀದಿ ಮಾಡುತ್ತದೆʼ ಎಂದು ಆರೋಪಿಸಿದೆ.

ಮಸ್ಕಿಯ ಮತದಾರರಿಗೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೊವನ್ನು ಟ್ಯಾಗ್ ಮಾಡಿರುವ ಕಾಂಗ್ರೆಸ್, ʻಚುನಾವಣೆಯಲ್ಲಿ ರಾಜ್ಯ ಬಿಜೆಪಿ ಹಣದ ಹೊಳೆ ಹರಿಸಿದೆ. ಬಿಜೆಪಿ ಹಣ ಹಂಚುವ ದೃಶ್ಯ ಇಡೀ ಜಗತ್ತಿಗೆ ಗೊತ್ತಾದರೂ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಣ್ಣಿಗೆ ಕಾಣಲಿಲ್ಲವೇ? ಕಂಡರೂ ಜಾಣ ಕುರುಡರಾದರೆ ಎಂದು ಪ್ರಶ್ನಿಸಿದೆ.

× Chat with us