BREAKING NEWS

ಮಾಜಿ ರಾಜ್ಯಪಾಲ ಸತ್ಯ‌ಪಾಲ್‌ ಮಲಿಕ್ ರ ಸಂದರ್ಶನ ನಡೆಸಿದ ಕಾಂಗ್ರೆಸ್ ನಾಯಕ ರಾಗಾ

ನವದೆಹಲಿ : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗಿನ ಸಂದರ್ಶನವೊಂದರಲ್ಲಿ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯ‌ ಪಾಲ್‌ ಮಲಿಕ್ ಅವರು 2019ರ ಪುಲ್ವಾಮ ದಾಳಿಯ ಕುರಿತು ಮತ್ತು ಕೆಲ ಇತರ ಮಹತ್ವದ ವಿಚಾರಗಳ ಕುರಿತು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದರೆ ರಾಹುಲ್‌ ಗಾಂಧಿ ಕೂಡ ಅಚ್ಚರಿಯ ಮಾಹಿತಿ ಹೊರಗೆಡಹಿದ್ದಾರೆ.

ಸರ್ಕಾರ ಪುಲ್ವಾಮ ದಾಳಿಯನ್ನು ನಿಭಾಯಿಸಿದ ರೀತಿಯನ್ನು ಟೀಕಿಸಿದ ರಾಹುಲ್‌, ಘಟನೆಯ ಬಗ್ಗೆ ತಿಳಿದಾಗ ಹುತಾತ್ಮರಿಗೆ ಗೌರವ ಸಲ್ಲಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗಿ ತಿಳಿಸಿದರು. “ಆದರೆ ನನ್ನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಯಿತು. ಅಲ್ಲೊಂದು ಸಮಾರಂಭ ಇದ್ದಂತೆ ಕಂಡಿತು. ಪ್ರಧಾನಿ ಮೋದಿ ಅಲ್ಲಿದ್ದರು. ಕೊಠಡಿಯ ಹೊರಹೋಗಲು ನಾನು ಹರಸಾಹಸ ಪಡಬೇಕಾಯಿತು,” ಎಂದು ರಾಹುಲ್‌ ಹೇಳಿದರು.

ಸತ್ಯಪಾಲ್‌ ಮಲಿಕ್‌ ಮಾತನಾಡಿ “ಈ ದಾಳಿ ನಮ್ಮ ತಪ್ಪು ಎಂದು ನಾನು ಎರಡು ಚಾನಲ್‌ಗಳಿಗೆ ಹೇಳಿದೆ, ಇದನ್ನು ಬೇರೆಲ್ಲೂ ಹೇಳದಂತೆ ನನಗೆ ಸೂಚನೆ ನೀಡಲಾಯಿತು. ನನ್ನ ಹೇಳಿಕೆ ತನಿಖೆಯನ್ನು ಬಾಧಿಸಬಹುದು ಎಂದು ಅಂದುಕೊಂಡೆ, ಆದರೆ ಯಾವುದೇ ತನಿಖೆ ನಡೆಯಲಿಲ್ಲ. ದಾಳಿಯನ್ನು ಚುನಾವಣೆ ಉದ್ದೇಶಗಳಿಗೆ ಬಳಸಲಾಯಿತು ಹಾಗೂ ದಾಳಿ ನಡೆದ ಮೂರನೇ ದಿನ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ದಾಳಿಯನ್ನು ರಾಜಕೀಯವಾಗಿ ಬಳಸಿಕೊಂಡರು,” ಎಂದು ಮಲಿಕ್‌ ಹೇಳಿದ್ದಾರೆ.

ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಸಾಗಿಸಲು ವಿಮಾನದ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದರೆ ಈ ದಾಳಿಯನ್ನು ತಡೆಯಬಹುದಾಗಿತ್ತು. ಸಿಬ್ಬಂದಿ ಅಪಾಯಕಾರಿ ಹಾದಿಯಲ್ಲಿ ಸಾಗಬೇಕಾಗಿ ಬಂತು ಎಂದು ಹೇಳಿದ ಮಲಿಕ್‌ ದಾಳಿಗೆ ಬಳಸಿದ ಸ್ಫೋಟಕಗಳು ಪಾಕಿಸ್ತಾನದಿಂದ ಬಂದಿದ್ದವು ಹಾಗೂ ದಾಳಿ ನಡೆಸಿದವರು ಉಗ್ರವಾದದ ಹಿನ್ನೆಲೆ ಹೊಂದಿದ್ದರು, ಇದು ಗುಪ್ತಚರ ವೈಫಲ್ಯಗಳ ಕುರಿತು ಪ್ರಶ್ನೆಗಳನ್ನೆತ್ತುತ್ತವೆ ಎಂದು ಅವರು ಹೇಳಿದರು.

“ಸಿಆರ್‌ಪಿಎಫ್‌ ವಾಹನದ ಮೇಲೆ ದಾಳಿ ನಡೆಸಿದ ಸ್ಫೋಟಕಗಳನ್ನು ತುಂಬಿದ್ದ ಟ್ರಕ್‌ ಆ ಪ್ರದೇಶದಲ್ಲಿ 10-12 ದಿನಗಳಿಂದ ಅಲೆದಾಡುತ್ತಿತ್ತು. ಈ ವಾಹನದ ಚಾಲಕ ಮತ್ತು ಮಾಲಕರಿಗೆ ಉಗ್ರವಾದದ ಹಿನ್ನೆಲೆಯಿತ್ತು. ಹಿಂದೆ ಹಲವಾರು ಬಾರಿ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು, ಆದರೂ ಗುಪ್ತಚರ ಇಲಾಖೆ ಅವರ ಮೇಲೆ ಕಣ್ಣಿಟ್ಟಿರಲಿಲ್ಲ,” ಎಂದು ಮಲಿಕ್‌ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಅದಾನಿ ಶಾಮೀಲಾತಿ ಕುರಿತು ಕೂಡ ರಾಹುಲ್‌ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಮಲಿಕ್‌, ಕನಿಷ್ಠ ಬೆಂಬಲ ಬೆಲೆಯ ಭರವಸೆಯನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದರಿಂದ ಕೃಷಿ ಉತ್ಪನ್ನ ಬೆಲೆಗಳನ್ನು ತನ್ನ ಪ್ರಯೋಜನಕ್ಕೆ ತಕ್ಕಂತೆ ಹೊಂದಲು ಅದಾನಿಗೆ ಸಾಧ್ಯವಾಯಿತು. ದೊಡ್ಡ ಗೋದಾಮುಗಳ ಸ್ಥಾಪನೆಯಿಂದ ಅದಾನಿ ಸಂಸ್ಥೆ ಬೆಳೆಗಳನ್ನು ಕಡಿಮೆ ಬೆಲೆಗೆ ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶವನ್ನಿಟ್ಟುಕೊಂಡಿದೆಎಂದು.

“ಮುಂದಿನ ವರ್ಷ ಬೆಲೆ ಏರಿಕೆಯಾದಾಗ ಅವರು ಮಾರಾಟ ಮಾಡುತ್ತಾರೆ. ಎಂಎಸ್‌ಪಿ ಜಾರಿಯಾದರೆ ರೈತರು ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡುವುದಿಲ್ಲ,” ಎಂದು ಹೇಳಿದರು

https://x.com/shaandelhite/status/1717088507636887792?s=20

andolanait

Recent Posts

ನಾಳೆಯಿಂದ ಐಪಿಎಲ್‌ ಶುರು : ಅಧಿಕಾರಿಗಳ ಜತೆ ಸಿಎಸ್‌ ಸುದೀರ್ಘ ಸಭೆ

ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…

1 hour ago

ಮದ್ದೂರು ಬಳಿ ಭೀಕರ ಅಪಘಾತ : 14 ಶಾಲಾ ಮಕ್ಕಳು ಸೇರಿದಂತೆ 20 ಮಂದಿಗೆ ಗಾಯ

ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…

2 hours ago

ಮಹದೇಶ್ವರ ಬೆಟ್ಟ | 23 ದಿನದಲ್ಲಿ 2 ಕೋಟಿ ಒಡೆಯನಾದ ಮಾದಪ್ಪ

ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…

2 hours ago

ಜನಪರ ಆಡಳಿತ ನೀಡುವಲ್ಲಿ ಸರ್ಕಾರ ವಿಫಲ : ನಿಖಿಲ್‌ ಕಿಡಿ

ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…

2 hours ago

ದಾವಣಗೆರೆ ದಕ್ಷಿಣ ಉಪಚುನಾವಣೆ : ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್‌

ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…

2 hours ago

SSLC | ಪರೀಕ್ಷೆ ಅಂಕ 625ರ ಬದಲಿಗೆ 525ಕ್ಕೆ ಇಳಿಕೆ ; ಲೆಕ್ಕಕ್ಕಿಲ್ಲ ತೃತೀಯ ಭಾಷೆ

ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…

2 hours ago