ನವದದೆಹಲಿ: ಭಾರತೀಯ ಜನತಾ ಪಕ್ಷ ಭಾನುವಾರದ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗಿದೆ ಎನ್ನಲಾದ ಭ್ರಷ್ಟಾಚಾರಗಳ ಪಟ್ಟಿ ಕೊಟ್ಟಿದೆ. ಇದು ಕೇವಲ ‘ಮುಖ್ಯಾಂಶ’ ಅಷ್ಟೇ ಎಂದಿರುವ ಬಿಜೆಪಿ, ತನ್ನ ಆರೋಪಕ್ಕೆ ‘ಕಾಂಗ್ರೆಸ್ ಫೈಲ್ಸ್’ ಎಂದು ಹೆಸರು ಕೊಟ್ಟಿದೆ. ಇದು ಕೇವಲ ಮೊದಲ ಎಪಿಸೋಡ್ ಅಷ್ಟೇ ಎಂದಿರುವ ಬಿಜೆಪಿ, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಅವಧಿಯಲ್ಲಿನ ಇನ್ನಷ್ಟು ಭ್ರಷ್ಟಾಚಾರಗಳನ್ನ ಜನರ ಮುಂದಿಡೋದಾಗಿ ಹೇಳಿದೆ.
ಬಿಜೆಪಿಯ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರಗಳು, ಅವ್ಯವಹಾರಗಳು, ಹಗರಣಗಳು ಹಾಗೂ ಅಕ್ರಮದ ಪಟ್ಟಿಯನ್ನು ನೀಡಲಾಗಿದೆ ಎಂದು ಬಿಜೆಪಿ ಹೇಳಿದೆ. ಇದು ಕಾಂಗ್ರೆಸ್ ಫೈಲ್ಸ್‌ನ ಮೊದಲ ಅಧ್ಯಾಯ ಎಂದು ಬಿಜೆಪಿ ಬಣ್ಣಿಸಿದೆ.
ಕಾಂಗ್ರೆಸ್ ಪಕ್ಷ ಎಂದರೆ ಭ್ರಷ್ಟಾಚಾರ ಎಂದು ಹೆಡ್‌ಲೈನ್ ಕೊಟ್ಟು ವಿಡಿಯೋ ಬಿಡುಗಡೆ ಮಾಡಿರುವ ಬಿಜೆಪಿ, ತನ್ನ ಅಧಿಕಾರಾವಧಿಯಲ್ಲಿ ಕಾಂಗ್ರೆಸ್ ಪಕ್ಷವು 48,20,69,00,00,000 ರೂ. ಅಕ್ರಮ ಎಸಗಿದೆ, ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆದಿದೆ ಎಂದು ಹೇಳಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರದ ಪಟ್ಟಿ ಕೊಟ್ಟಿರುವ ಬಿಜೆಪಿ, ಇದೇ ಹಣವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡಿದ್ದರೆ ಏನೆಲ್ಲಾ ಸಾಧನೆ ಮಾಡಬಹುದಿತ್ತು ಎಂದು ವಿವರಿಸಿದೆ. ದೇಶದ ಅಭಿವೃದ್ಧಿ, ಭದ್ರತೆ ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಬಹುದಾಗಿದ್ದ ಹಣವನ್ನು ಕಾಂಗ್ರೆಸ್ ಪಕ್ಷದ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಹೆಸರಲ್ಲಿ ಕಬಳಿಸಿರುವ ಹಣವನ್ನು ಅಭಿವೃದ್ಧಿಗೆ ಬಳಸಿದ್ದರೆ ಭಾರತ ದೇಶವು 24 ಐಎನ್‌ಎಸ್ ವಿಕ್ರಾಂತ್ ನಿರ್ಮಿಸಬಹುದಿತ್ತು. 300 ರಫೇಲ್ ಯುದ್ಧ ವಿಮಾನ ಖರೀದಿಸಬಹುದಿತ್ತು. ಒಂದು ಸಾವಿರ ಮಂಗಳ ಯಾನ ಕಾರ್ಯಕ್ರಮ ನಡೆಸಬಹುದಿತ್ತು ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬೆಲೆಯನ್ನು ಇಡೀ ದೇಶ ತೆತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಇದೆ ಕಾರಣದಲ್ಲಿ ನಾವು ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ದೂರಿದೆ.
ಇನ್ನು 2004 ರಿಂದ 2014ರ ಅವಧಿಯನ್ನು ‘ಕಳೆದು ಹೋದ ದಶಕ’ ಎಂದೇ ಬಿಜೆಪಿ ಬಣ್ಣಿಸಿದೆ. ಏಕೆಂದರೆ ಕಾಂಗ್ರೆಸ್ ಆಡಳಿತಾವಧಿಯ 70 ವರ್ಷ ಪಕ್ಕಕ್ಕಿಟ್ಟು ಕೇವಲ 2004 ರಿಂದ 2014ರ ಅವಧಿಯ 1 ದಶಕವನ್ನೇ ತೆಗೆದುಕೊಂಡರೆ, ಈ ಅವಧಿಯಲ್ಲಿ ಕಳೆದುಕೊಂಡದ್ದು ಲೆಕ್ಕವೇ ಇಲ್ಲ ಎಂದು ಬಿಜೆಪಿ ಹೇಳಿದೆ. ಈ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್, ಮೌನವಾಗಿದ್ದರು, ಕಣ್ಮುಚ್ಚಿಕೊಂಡು ದೇಶದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ನೋಡುತ್ತಿದ್ದರು ಎಂದು ಬಿಜೆಪಿ ಹೇಳಿದೆ. ಈ ಅವಧಿಯಲ್ಲಿ ಯಾವುದೇ ಪತ್ರಿಕೆಗಳನ್ನ ನೋಡಿದರೂ ಭ್ರಷ್ಟಾಚಾರದ ಸುದ್ದಿಯೇ ರಾರಾಜಿಸುತ್ತಿತ್ತು. ಇದನ್ನು ನೋಡಿದ ಪ್ರತಿಯೊಬ್ಬ ಭಾರತೀಯನೂ ನಾಚಿಕೆಯಿಂದ ತಲೆ ತಗ್ಗಿಸುವಂತೆ ಆಗುತ್ತಿತ್ತು ಎಂದು ಬಿಜೆಪಿ ಹೇಳಿದೆ.
1.86 ಲಕ್ಷ ಕೋಟಿ ರೂ. ಕಲ್ಲಿದ್ದಲು ಹಗರಣ, 1.76 ಲಕ್ಷ ಕೋಟಿ ರೂ. ಟುಜಿ ಹಗರಣ, 10 ಲಕ್ಷ ಕೋಟಿ ರೂ. ನರೇಗಾ ಹಗರಣ, 70 ಸಾವಿರ ಕೋಟಿ ರೂ. ಕಾಮನ್‌ವೆಲ್ತ್ ಹಗರಣ, ಹೆಲಿಕಾಪ್ಟರ್ ಖರೀದಿ ವೇಳೆ 362 ಕೋಟಿ ರೂ. ಲಂಚ, ರೈಲ್ವೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ 12 ಕೋಟಿ ರೂ. ಲಂಚ ಸೇರಿದಂತೆ ಹಲವು ಹಗರಣಗಳು ಇವೆ ಎಂದು ಬಿಜೆಪಿ ಹೇಳಿದೆ.
ಇನ್ನು ತನ್ನ ವಿಡಿಯೋದ ಕೊನೆಯಲ್ಲಿ ಬಿಜೆಪಿ ಟಾಂಗ್ ಕೂಡಾ ನೀಡಿದೆ. ಇದು ಕಾಂಗ್ರೆಸ್ ಹಗರಣಗಳ ಒಂದು ಟ್ರೇಲರ್ ಮಾತ್ರ ಎಂದಿರುವ ಬಿಜೆಪಿ, ಸಂಪೂರ್ಣ ಸಿನೆಮಾ ಇನ್ನೂ ಬಾಕಿ ಇದೆ ಎಂದು ಹೇಳಿದೆ. ಒಟ್ಟು 3 ನಿಮಿಷ ಹಾಗೂ 4 ಸೆಕೆಂಡ್‌ಗಳ ವಿಡಿಯೋದಲ್ಲಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹಲವು ಆರೋಪಗಳನ್ನ ಮಾಡಿದೆ.
ಬೆಂಗಳೂರು: ಕೆಪಿಎಸ್‌ಸಿ ವತಿಯಿಂದ ಇದೇ ಡಿಸೆಂಬರ್ 29ಕ್ಕೆ ಕೆಎಎಸ್ ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಈ ಪರೀಕ್ಷೆಯಲ್ಲಿ ಮತ್ತೆ ಬೇಜವಾಬ್ದಾರಿತನ…
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…