ಮೇಯರ್‌ ಚುನಾವಣೆ: ಜೆಡಿಎಸ್‌ನೊಂದಿಗೆ ಮೈತ್ರಿಗೆ ಕಾಂಗ್ರೆಸ್‌, ಬಿಜೆಪಿ ಅಂತಿಮ ಕಸರತ್ತು

ಮೈಸೂರು: ಮೈಸೂರು ಮಹಾನಗರಪಾಲಿಕೆ ಮೇಯರ್‌-ಉಪಮೇಯರ್‌ ಸ್ಥಾನಗಳ ಚುನಾವಣೆ ಇಂದು (ಬುಧವಾರ) ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ. ಜೆಡಿಎಸ್‌ನೊಂದಿಗೆ ಮೈತ್ರಿಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಂತಿಮ ಕಸರತ್ತು ನಡೆಸುತ್ತಿವೆ.

ಮೇಯರ್ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ನಿರ್ಧಾರಿಸಿದೆ. ಆದರೆ, ಯಾರ ಜೊತೆ ಮೈತ್ರಿ ಎಂಬ ನಿರ್ಧಾರ ಇನ್ನೂ ನಿಗೂಢವಾಗಿದೆ. ಮೇಯರ್ ರೇಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜೆಡಿಎಸ್ ರೇಸ್‌ನಲ್ಲೀಗ ಕೇವಕ ಇಬ್ಬರು ಆಕಾಂಕ್ಷಿಗಳು ಮಾತ್ರ ಉಳಿದಿದ್ದಾರೆ. ಅಶ್ವಿನಿ ಅನಂತು ಹಾಗೂ ರುಕ್ಮಿಣಿ ಮಾದೇಗೌಡ ಹೆಸರು ಅಂತಿಮ ಆಗಿದೆ ಎಂದು ಮೂಲಗಳು ತಿಳಿಸಿವೆ. ಅಶ್ವಿನಿ ಅನಂತು ಮೇಯರ್ ಆಗುವುದು ಬಹುತೇಕ ಖಚಿತವಾಗಿದೆ.

ರೇಸ್‌ನಲ್ಲಿ ರುಕ್ಮಿಣಿ ಮಾದೇಗೌಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಮೈಸೂರು ಪಾಲಿಕೆ ಮೇಯರ್‌ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ದೂರವಾಣಿ ಕರೆ ಮಾಡಿ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಜೊತೆ ಬಿಜೆಪಿ ಮಾತುಕತೆ ಬೆನ್ನಲ್ಲೆ ತನ್ವೀರ್ ಭೇಟಿಯಾಗಿದ್ದಾರೆ. ತನ್ವೀರ್ ಮೂಲಕ ಮೈತ್ರಿ ಸಾಧನೆಗೆ ಡಿಕೆಶಿ ಯತ್ನಿಸಿದ್ದಾರೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜೆಡಿಎಸ್‌ ಮೈತ್ರಿಗೆ ಕಸರತ್ತು ನಡೆಯುತ್ತಿದೆ. ತನ್ನ ನಡೆ ಜೆಡಿಎಸ್‌ ಇನ್ನೂ ಸ್ಪಷ್ಟಪಡಿಸಿಲ್ಲ. ಜೆಡಿಎಸ್‌ ಮೈತ್ರಿ ಯಾರೊಂದಿಗೆ ಎನ್ನುವುದು ಕುತೂಹಲ ಮೂಡಿಸಿದೆ.

12 ಗಂಟೆಗೆ ಚುನಾವಣೆ ನಿಗದಿಯಾಗಿದ್ದು, ಹೋಟೆಲ್‌ ಪ್ರೆಸಿಡೆಂಟ್‌ನಲ್ಲಿ ಬಿಜೆಪಿ ಪಾಲಿಕೆ ಸದಸ್ಯರು ಉಳಿದಿದ್ದಾರೆ. ಸಚಿವ ಎಸ್‌.ಟಿ.ಸೋಮಶೇಖರ್‌ ಹೋಟೆಲ್ ಪ್ರೆಸಿಡೆಂಟ್ ಆಗಮಿಸಿ ಪಾಲಿಕೆ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ನಿರ್ಧಾರ ಕುರಿತು ಸದಸ್ಯರ ಜೊತೆ ಸೋಮಶೇಖರ್‌ ಮಾತುಕತೆ ನಡೆಸಲಿದ್ದಾರೆ.

× Chat with us