ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ 124 ಹಾಗೂ ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಈಗ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಇನ್ನು 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.
ಶುಕ್ರವಾರವಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ್ ಸವದಿಗೆ ಅಥಣಿ ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯನವರ ಎರಡು ಕ್ಷೇತ್ರ ಸ್ಪರ್ಧೆಗೆ ಸೊಪ್ಪುಹಾಕದ ಕಾಂಗ್ರೆಸ್ ಹೈಕಮಾಂಡ್ ಕೋಲಾರ ಕ್ಷೇತ್ರಕ್ಕೆ ಕೊತ್ತೂರು ಮಂಜುನಾಥ್ ಅವರಿಗೆ ಟಿಕೆಟ್ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಎದುರು ಪ್ರದೀಪ್ ಈಶ್ವರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಚಿಕ್ಕಪೇಟೆಗೆ ಆರ್ ವಿ ದೇವರಾಜ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಕುಂದಗೋಳದಲ್ಲಿ ಹಾಲಿ ಶಾಸಕಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಅರಸೀಕೆರೆ ಕ್ಷೇತ್ರಕ್ಕೆ ಶಿವಲಿಂಗೇಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ. 16 ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ. ಪುಲಿಕೇಶಿ ನಗರದಲ್ಲಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಈ ಹಿನ್ನೆಲೆ ಹಾಲಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅತಂತ್ರರಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ!
1. ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್
2. ಗೋಕಾಕ್ – ಮಹಂತೇಶ್ ಕಡಾಡಿ
3. ಕಿತ್ತೂರು – ಬಾಬಾಸಾಹೇಬ್ ಬಿ.ಪಾಟೀಲ್
4. ಸೌದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವೈದ್ಯ
5. ಮುಧೋಳ (ಎಸ್‌ಸಿ)- ರಾಮಪ್ಪ ಬಾಲಪ್ಪ ತಿಮ್ಮಾಪುರ
6. ಬೀಳಗಿ- ಜೆ.ಟಿ. ಪಾಟೀಲ್
7. ಬಾದಾಮಿ- ಭೀಮಸೇನ್ ಬಿ. ಚಿಮ್ಮನಕಟ್ಟಿ
8. ಬಾಗಲಕೋಟೆ – ಹುಲ್ಲಪ್ಪ ವೈ. ಮೇಟಿ
9. ಬಿಜಾಪುರ ನಗರ-ಅಬ್ದುಲ್ ಹಮೀದ್ ಖಾಜಾಸಾಹೇಬ್ ಮುಶ್ರಿಫ್
10. ನಾಗಠಾಣ (ಎಸ್‌ಸಿ)- ವಿಠ್ಠಲ ಕಟಕದೊಂಡ
11. ಅಫ್ಜಲ್‌ಪುರ – ಎಂ.ವೈ. ಪಾಟೀಲ್
12. ಯಾದಗಿರಿ- ಚನ್ನರೆಡ್ಡಿ ಪಾಟೀಲ್ ತುಣ್ಣೂರ್
13. ಗುರಮಿಠ್‌ಕಲ್- ಬಾಬುರಾವ್ ಚಿಂಚನಸೂರ
14. ಗುಲ್ಬರ್ಗ ದಕ್ಷಿಣ – ಅಲ್ಲಮಪ್ರಭು ಪಾಟೀಲ್
15. ಬಸವಕಲ್ಯಾಣ – ವಿಜಯ್ ಧರಂ ಸಿಂಗ್
16. ಗಂಗಾವತಿ – ಇಕ್ಬಾಲ್ ಅನ್ಸಾರಿ
17. ನರಗುಂದ – ಬಿಆರ್ ಯಾವಗಲ್
18. ಧಾರವಾಡ – ವಿನಯ್ ಕುಲಕರ್ಣಿ
19. ಕಲಘಟಗಿ-ಸಂತೋಷ್ ಎಸ್. ಲಾಡ್
20. ಶಿರಸಿ – ಭೀಮಣ್ಣ ನಾಯ್ಕ್
21. ಯಲ್ಲಾಪುರ – ವಿ.ಎಸ್.ಪಾಟೀಲ್
22. ಕೂಡ್ಲಿಗಿ (ಎಸ್‌ಟಿ) – ಡಾ ಶ್ರೀನಿವಾಸ್ ಎಂ.ಟಿ
23. ಮೊಳಕಾಲ್ಮೂರು (ಎಸ್‌ಟಿ)-ಎನ್.ವೈ. ಗೋಪಾಲಕೃಷ್ಣ
24. ಚಿತ್ರದುರ್ಗ – ಕೆ.ಸಿ.ವೀರೇಂದ್ರ (ಪಪ್ಪಿ)
25. ಹೊಳಲ್ಕೆರೆ (ಎಸ್‌ಸಿ)- ಆಂಜನೇಯ ಎಚ್ 26. ಚೆನ್ನಗಿರಿ – ಬಸವರಾಜು ವಿ ಶಿವಗಂಗ
27. ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
28. ಉಡುಪಿ – ಪ್ರಸಾದ್ ರಾಜ್ ಕಾಂಚನ್
29. ಕಡೂರು – ಆನಂದ್ ಕೆ.ಎಸ್
30. ತುಮಕೂರು ನಗರ – ಇಕ್ಬಾಲ್ ಅಹ್ಮದ್
31. ಗುಬ್ಬಿ – ಎಸ್.ಆರ್.ಶ್ರೀನಿವಾಸ್
32. ಯಲಹಂಕ – ಕೇಶವ ರಾಜಣ್ಣ ಬಿ
33. ಯಶವಂತಪುರ – ಸ್.ಬೈರಾಜ್ ಗೌಡ
34. ಮಹಾಲಕ್ಷ್ಮಿ ಲೇಔಟ್ – ಕೇಶವಮೂರ್ತಿ
35. ಪದ್ಮನಾಭ ನಗರ- ವಿ.ರಘುನಾಥ ನಾಯ್ಡು
36. ಮೇಲುಕೋಟೆ – ಸರ್ವೋದಯ ಪಾರ್ಟಿಯ ದರ್ಷನ್ ಪುಟ್ಟಣ್ಣಯ್ಯಗೆ ಬೆಂಬಲ
37. ಮಂಡ್ಯ – ಪಿ ರವಿಕುಮಾರ್
38. ಕೃಷ್ಣರಾಜಪೇಟೆ- ಬಿ.ಎಲ್.ದೇವರಾಜ್
39. ಬೇಲೂರು-ಬಿ.ಶಿವರಾಮ್
40. ಮಡಿಕೇರಿ- ಡಾ.ಮಂತರ್ ಗೌಡ
41. ಚಾಮುಂಡೇಶ್ವರಿ-ಸಿದ್ದೇಗೌಡ
42. ಕೊಳ್ಳೇಗಾಲ (ಎಸ್‌ಸಿ) – ಎ.ಆರ್.ಕೃಷ್ಣಮೂರ್ತಿ
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡ ಸಾಹಿತ್ಯ…
ಮಂಡ್ಯ: ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮ್ಮದ್ ಇಬ್ರಾಹಿಂ ಪೊಲೀಸರ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ.…
ಕುಶಾಲನಗರ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬರು ಜಲ ಸಮಾಧಿಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಸಮೀಪದಲ್ಲಿ…