BREAKING NEWS

ಕಾಂಗ್ರೆಸ್‌ನ 23 ವರ್ಷದ‌ ತ್ರಿವೇಣಿ ಬಳ್ಳಾರಿ ಮೇಯರ್: ಜಾನಕಮ್ಮ ಉಪ ಮೇಯರ್

ಬಳ್ಳಾರಿ: ನಗರದ ಮೇಯರ್ ಅಗಿ ಕಾಂಗ್ರೆಸ್‌ನ ತ್ರಿವೇಣಿ ಮತ್ತು ಉಪ ಮೇಯರ್ ಅಗಿ‌‌ ಜಾನಕಮ್ಮ ಬುಧವಾರ ಆಯ್ಕೆಯಾದರು.

ಮೇಯರ್ ಗದ್ದುಗೆಗಾಗಿ ಕಾಂಗ್ರೆಸ್‌ನಲ್ಲಿ ಮೂರು ದಿನಗಳಿಂದ ನಡೆದ‌ ಗುದ್ದಾಟ ಕೊನೆ ಗಳಿಗೆವರೆಗೂ ನಡೆಯಿತು. ಇದರ ಲಾಭ ಪಡೆಯಲು ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನಿಸಿತು. ಅದು ಕೈಗೂಡಲಿಲ್ಲ.

ಮೇಯರ್ ಸ್ಥಾನಕ್ಕೆ ತ್ರಿವೇಣಿ,‌ ಉಮಾದೇವಿ‌ ಮತ್ತು ಕುಬೇರ ನಾಮಪತ್ರ‌‌ ಸಲ್ಲಿಸಿದ್ದರು. ಪಕ್ಷದ‌ ‌ವೀಕ್ಷಕರಾದ ಚಂದ್ರಪ್ಪ ಮತ್ತು ಜಿಲ್ಲಾ ಮುಖಂಡರು ‌ಉಳಿದಿಬ್ಬರ ನಾಮಪತ್ರ ವಾಪಸ್ ತೆಗೆಸಿದರು. ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮೇಯರ್ ಸ್ಥಾನಕ್ಕೆ ನೇರ ಹಣಾಹಣಿ ನಡೆಯಿತು.

ತ್ರಿವೇಣಿಗೆ 28 ಮತಗಳು ಬಿದ್ದರೆ,‌ ಬಿಜೆಪಿಯ ನಾಗರತ್ನಮ್ಮ ಅವರಿಗೆ 16 ಮತಗಳು ಬಂದವು. ಉಪ ಮೇಯರ್ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿದ್ದರಿಂದ ಜಾನಕಮ್ಮ ಅವರ ಆಯ್ಕೆ‌ ಅವಿರೋಧವಾಯಿತು.

ಕೆಪಿಸಿಸಿ ವೀಕ್ಷಕರಾದ‌‌ ಚಂದ್ರಪ್ಪ ಮಂಗಳವಾರ ಸಂಜೆಯೇ ಬಳ್ಳಾರಿ ಗೆ ಬಂದಿದ್ದರು. ಮಧ್ಯರಾತ್ರಿವರೆಗೂ ಪಾಲಿಕೆ‌ ಸದಸ್ಯರ ಜತೆ ಸಮಾಲೋಚಿಸಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ಶ್ರಮಿಸಿದರೂ ಪ್ರಯೋಜನ ಆಗಲಿಲ್ಲ. ಬೆಳಿಗ್ಗೆ ಪುನಃ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆಸಿದರು. ಕೊನೆ ಕ್ಷಣದವರೆಗೆ ಹಗ್ಗ‌ ಜಗ್ಗಾಟ ನಡೆಯಿತು.

ಇದಾದ‌ ಬಳಿಕ‌ ಕುಬೇರ ನಾಮಪತ್ರ ವಾಪಸ್ ಪಡೆದರು. ರಾಜ್ಯಸಭೆ‌ ಕಾಂಗ್ರೆಸ್‌ ಸದಸ್ಯ ಸಯ್ಯದ್ ನಾಸಿರ್‌ ಹುಸೇನ್ ನಾಮಪತ್ರ ವಾಪಸ್ ಪಡೆಯಲು ಉಮಾದೇವಿ ಅವರಿಗೆ ‌ಸೂಚಿಸಿದರು. ಆ ಸಂದರ್ಭದಲ್ಲಿ ಉಮಾದೇವಿ ಕಣ್ಣೀರಿಟ್ಟರು.

ಪಾಲಿಕೆಯಲ್ಲಿ‌ 39 ಸದಸ್ಯರಿದ್ದು ಕಾಂಗ್ರೆಸ್ 21, ಬಿಜೆಪಿ 13 ಸದಸ್ಯರ ಬಲ ಹೊಂದಿದೆ. ಐವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ವಿಧಾನಸಭೆ, ವಿಧಾನಪರಿಷತ್ ಹಾಗೂ ಸಂಸದರಿಗೂ ಮತದಾನದ‌ ಹಕ್ಕಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ‌ ಕಾಂಗ್ರೆಸ್ ಶಾಸಕ ನಾಗೇಂದ್ರ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದರೂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾರ ಪರ ವಹಿಸದೆ ‌ತಟಸ್ಥರಾಗಿ ಉಳಿದರು.

23ನೇ ವರ್ಷಕ್ಕೆ‌ ಮೇಯರ್ ಸ್ಥಾನ:
ಬಳ್ಳಾರಿ ನಗರದ ಮೇಯರ್ ತ್ರಿವೇಣಿ ಅವರಿಗೆ ಈಗ ಕೇವಲ 23 ವರ್ಷ. ಅತೀ ಚಿಕ್ಕ‌ ವಯಸ್ಸಿಗೆ ಅವ‌ರು‌ ನಗರದ ಪ್ರಥಮ ಪ್ರಜೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಪದವಿ ಶಿಕ್ಷಣ ಪೂರೈಸಿದ ತಕ್ಷಣ ಅವರಿಗೆ ಮೇಯರ್ ‌ಹುದ್ದೆ ಅಲಂಕರಿಸುವ ಅದೃಷ್ಟ ಒಲಿದಿದೆ. ಅಷ್ಟೇ ಅಲ್ಲ , ಅವರ ಕುಟುಂಬದ 2ನೇ ಮೇಯರ್ ಎಂಬ ಹೆಗ್ಗಳಿಕೆಯೂ ಇವರದಾಗಿದೆ.‌ ಇವರ ತಾಯಿ ಸುಶೀಲಾಬಾಯಿ ಈ ಹಿಂದೆ ನಗರದ ಮೇಯರ್ ಆಗಿದ್ದರು.

andolanait

Recent Posts

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

3 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

3 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

3 hours ago

ಸುಬ್ಬಮ್ಮ ಜೋಯಿಸ್ ಮೈಸೂರಿನಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು

ಸೋನಿಯಾ ಎಮ್.ವಿ., ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್ ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ…

3 hours ago

ಉರಿ ಉಂಡ ಕರ್ಪೂರ ಟಿ.ಎಸ್.ಸುಬ್ಬಣ್ಣ

ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…

3 hours ago

ಬ್ಯಾರಿಸ್ಟರ್ ಏನೋ ಆದೆ ಆದರೆ ಆಮೇಲೆ?

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು…

3 hours ago