ಜೈಪುರ : ಕೋಟಾ ನಗರದಲ್ಲಿನ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ತಡೆಗಾಗಿ ಸಲಹಾ ಕ್ರಮಗಳನ್ನು ಸೂಚಿಸಲು ಸಮಿತಿಯೊಂದನ್ನು ರಚಿಸುವಂತೆ ಶುಕ್ರವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಧಿಕಾರಿಗಳು ಹಾಗೂ ತರಬೇತಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ನಿರ್ದೇಶನವನ್ನು ನೀಡಿದ್ದಾರೆ. ಕೋಟಾ ನಗರದಲ್ಲಿ 12ನೇ ತರಗತಿಯ 17 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಎರಡು ವಾರಗಳ ನಂತರ ಈ ಸಭೆಯನ್ನು ನಡೆಸಲಾಗಿದೆ.
ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಪ್ರವೇಶ ಪರೀಕ್ಷೆಗಳಲ್ಲದೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಕೇಂದ್ರ ಸ್ಥಾನವಾಗಿರುವ ಕೋಟಾದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಇಂತಹ 20 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
ಸಮಿತಿಯು ತರಬೇತಿ ಸಂಸ್ಥೆಯ ಪ್ರತಿನಿಧಿಗಳನ್ನಲ್ಲದೆ ಪೋಷಕರು ಹಾಗೂ ವೈದ್ಯರನ್ನೂ ಹೊಂದಿರಬೇಕು ಎಂದು ಶುಕ್ರವಾರ ಗೆಹ್ಲೋಟ್ ಸೂಚಿಸಿದ್ದಾರೆ. ಸಮಿತಿಯು 15 ದಿನಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕು ಎಂದೂ ಅವರು ನಿರ್ದೇಶಿಸಿದ್ದಾರೆ.
PTI ಸುದ್ದಿ ಸಂಸ್ಥೆಯ ಪ್ರಕಾರ, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಮಂಡಳಿ ಪರೀಕ್ಷೆಗಳಿಗೂ ಹಾಜರಾಗಬೇಕಿರುವುದರಿಂದ, ಅವರು ಈ ತರಬೇತಿ ಸಂಸ್ಥೆಗಳಲ್ಲೂ ನೋಂದಾಯಿಸಿಕೊಳ್ಳುವುದು ಅವರ ಪಾಲಿಗೆ ಹೆಚ್ಚುವರಿ ಹೊರೆಯಾಗಿ ಬದಲಾಗಿದೆ ಎಂದು ಗೆಹ್ಲೋಟ್ ಅಭಿಪ್ರಾಯ ಪಟ್ಟಿದ್ದಾರೆ.
“ನೀವು ಸಭೆಗೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ. ನೀವು ಒಂದು ರೀತಿಯಲ್ಲಿ ಅಪರಾಧವೆಸಗುತ್ತಿದ್ದೀರಿ. ಐಐಟಿ ದೇವರಿದ್ದಂತೆ ಎಂಬಂತಾಗಿದೆ. ವಿದ್ಯಾರ್ಥಿಗಳು ತರಬೇತಿಗೆ ಬಂದ ಕೂಡಲೇ ಅವರನ್ನು ನಕಲಿ ಶಾಲೆಗಳಿಗೆ ನೋಂದಾಯಿಸಲಾಗುತ್ತಿದೆ. ಇದೂ ಕೂಡಾ ಪೋಷಕರ ಪ್ರಮಾದವಾಗಿದೆ” ಎಂದು ಗೆಹ್ಲೋಟ್ ಕಿಡಿ ಕಾರಿದ್ದಾರೆ.
ವಿದ್ಯಾರ್ಥಿಗಳು ಆರು ಗಂಟೆಯ ತರಬೇತಿ ತರಗತಿಗಳು, ಹೆಚ್ಚುವರಿ ತರಗತಿಗಳು ಹಾಗೂ ವಾರದ ಪರೀಕ್ಷೆಗೆ ಹಾಜರಾಗಬೇಕಿದೆ. ಸುಧಾರಣೆ ತರಲು ಇದು ಸೂಕ್ತ ಸಮಯ. ನಾವು ಎಳೆಯ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಲಾಗುವುದಿಲ್ಲ” ಎಂದು ಅಧಿಕಾರಿಗಳಿಗೆ ಗೆಹ್ಲೋಟ್ ಎಚ್ಚರಿಕೆ ನೀಡಿದ್ದಾರೆ.
ಪಂಜು ಗಂಗೊಳ್ಳಿ ಜೈಲಿನ ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನ್ನಾಗಿಸಲು ಮಹತ್ವದ ಯೋಜನೆ ರಾಜೇಶ್ ಕುಮಾರ್ ಯಾವತ್ತೂ ಶಾಲೆಯ ಮಟ್ಟಿಲು ಹತ್ತಿದವನಲ್ಲ. ಹಾಗಾಗಿ,…
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…