ಹೊಸದಿಲ್ಲಿ : ಸಾರ್ವಜನಿಕ ರಂಗದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಗುರುವಾರ ಇಳಿಕೆ ಮಾಡಿವೆ. ಆದರೆ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತೀಚಿನ ದರ ಪರಿಷ್ಕರಣೆಯ ನಂತರ ಹೊಸದಿಲ್ಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ 83.50 ರೂ. ಇಳಿಕೆಯಾಗಿದ್ದು ಸಿಲಿಂಡರ್‌ಗೆ 1,773 ರೂ.ಗೆ ಇಳಿದಿದೆ. ಈ ಹಿಂದೆ ಪ್ರತಿ ಸಿಲಿಂಡರ್ ದರ 1,856.50 ರೂ. ಇತ್ತು.
ಕೋಲ್ಕತ್ತಾದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಈಗ 1875.50 ರೂ.ಗೆ ಇಳಿದಿದೆ. ಮುಂಬೈನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ 1,725 ರೂ.ಗೆ ಇಳಿಕೆಯಾಗಿದ್ದರೆ, ಚೆನ್ನೈನಲ್ಲಿ ಸದ್ಯ 19 ಕೆಜಿ ತೂಕದ ಸಿಲಿಂಡರ್‌ಗೆ 1937 ರೂ. ದರ ಇದೆ.
ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇಂದಿನಿಂದಲೇ ಅಂದರೆ ಜೂನ್ 1ರಿಂದಲೇ ಹೊಸ ದರಗಳು ಅನ್ವಯವಾಗಲಿವೆ.
ತೈಲ ಮಾರುಕಟ್ಟೆ ಕಂಪನಿಗಳು ಮೇ ತಿಂಗಳಲ್ಲಿ ಕೊನೆಯ ಬಾರಿಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಬದಲಾಯಿಸಿದ್ದವು. ಈ ವೇಳೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 171.50 ರೂಪಾಯಿ ಕಡಿತಗೊಳಿಸಿದ್ದವು. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಇದೇ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಮಾರ್ಚ್‌ನಲ್ಲಿ 350.50 ರೂ.ನಷ್ಟು ಏರಿಕೆ ಮಾಡಲಾಗಿತ್ತು.
ಆದರೆ ಮನೆಗಳಲ್ಲಿ ಅಡುಗೆಗೆ ಬಳಕೆ ಮಾಡುವ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ದರ ಹಲವು ಸಮಯದಿಂದ ಗರಿಷ್ಠ ಮಟ್ಟದಲ್ಲೇ ಇದ್ದು, ಮಾರ್ಚ್‌ನಲ್ಲಿ ಪ್ರತಿ ಸಿಲಿಂಡರ್ ದರವನ್ನು 50 ರೂ. ಏರಿಕೆ ಮಾಡಲಾಗಿತ್ತು. ಇದರಲ್ಲಿ ಯಾವುದೇ ಇಳಿಕೆ ಆಗಿಲ್ಲ. ಪ್ರಸ್ತುತ, ಹೊಸದಿಲ್ಲಿಯಲ್ಲಿ ಗೃಹಬಳಕೆಯ ಅಡುಗೆ ಅನಿಲದ ಬೆಲೆ 14.2 ಕೆಜಿ ಸಿಲಿಂಡರ್‌ಗೆ 1,003 ರೂ. ಇದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಕ್ರಮವಾಗಿ 1,029 ರೂ., 1,002.5 ರೂ. ಮತ್ತು 1,018.5 ರೂ. ಇದೆ.
ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಖರೀದಿಸಲು ಗ್ರಾಹಕರು 1105.50 ರೂ. ಪಾವತಿಸಬೇಕಿದೆ.
ಚಾಮರಾಜನಗರ: ತಾಲ್ಲೂಕಿನ ಯಾಲಕ್ಕೂರು ಹಾಗೂ ಸುತ್ತಮುತ್ತಲಿನ ಆರು ಗ್ರಾಮಗಳಿಗೆ ಸಾರಿಗೆ ಬಸ್ಸೇ ಇಲ್ಲ ಎಂದು ‘ಆಂದೋಲನ ಪತ್ರಿಕೆ’ಯಲ್ಲಿ ಈಚೆಗೆ ಪ್ರಕಟವಾಗಿದ್ದ…
ಬಿಸಿಲಲ್ಲೋ ಅಣ್ಣ ಇದು ಬರಿ ಬಿಸಿಲಲ್ಲೋ ! ಯಾರು ಹೆಸರಿಟ್ಟರೋ? ಇದಕ್ಕೆ ‘ನಿಲ್ಲೋ ಎಲ್ಲೋ’ ನಿಂತಲ್ಲಿ ನಿಲ್ಲಲು, ಕುಂತಲ್ಲಿ ಕೂರಲು…
ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಬಲವರ್ಧನೆಗೆ ಸರ್ಕಾರ ಮುಂದಾಗಿರುವುದು ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಸಂಗತಿ. ಮೂಲಸೌಕರ್ಯದ…
ಮಕ್ಕಳು ಬೋರ್ಡ್ ಪರೀಕ್ಷೆಗಳಲ್ಲಿ ಅಂಕಗಳನ್ನು ತೆಗೆಯುವ ಅರ್ಹತೆ ಇದ್ದರೂ, ಇಂಟರ್ನಲ್ಸ್ ಮಾರ್ಕ್ಸ್(ಆಂತರಿಕ ಅಂಕ) ಎಂಬ ಭೂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ…
ಪುನೀತ್ ಮಡಿಕೇರಿ ಇಲಾಖೆಯಲ್ಲಿ ಸಿಬ್ಬಂದಿ ನೇಮಕಕ್ಕೆ ಪ್ರವಾಸೋದ್ಯಮಿಗಳ ಆಗ್ರಹ ಮಡಿಕೇರಿ: ಕೊಡಗಿನಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸಲು ನಾವಿಕನೇ ಇಲ್ಲದಾಗಿದ್ದು, ಕಳೆದ ಒಂದು ವರ್ಷದಿಂದ…