ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ಗುರುವಾರ ವರದಿ ನೀಡಲಿದ್ದು, ವರದಿಯನ್ನಾಧರಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಮಾತನಾಡಿದ ಅವರು, ಪಠ್ಯಗಳಲ್ಲಿ ಅಳವಡಿಸಿರುವ ಕೆಲ ಪಾಠಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಬರುತ್ತಿವೆ. ಹಾಗಾಗಿ, ಶಿಕ್ಷಣ ಸಚಿವರಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ಎಲ್ಲ ಆಯಾಮಗಳಿಂದಲೂ ಪರಿಶೀಲಿಸಿ ಶಿಕ್ಷಣ ಸಚಿವರು ನಾಳೆ ವರದಿ ನೀಡುವರು ಎಂದು ತಿಳಿಸಿದರು.
ಕೆಲ ಸ್ವಾಮೀಜಿಗಳು, ಶಿಕ್ಷಣ ತಜ್ಞರೂ ತಮಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡಲಿದೆ. ಕೆಲ ಸಾಹಿತಿಗಳು ತಮ್ಮ ಪಠ್ಯಗಳನ್ನು ಶಾಲಾ ಪಠ್ಯದಿಂದ ವಾಪಸ್ ಪಡೆಯುವಂತೆ ಪತ್ರ ಬರೆದಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಸಚಿವರ ವರದಿ ನಂತರ ಈ ಎಲ್ಲದ್ದಕ್ಕೂ ಒಂದು ತೆರೆ ಬೀಳುತ್ತದೆ. ನಾಳೆಯೇ ಶಿಕ್ಷಣ ಸಚಿವರು ವರದಿ ನೀಡುತ್ತಾರೆ ಎಂದರು.
ಹಿಜಾಬ್ ಮತ್ತು ಲವ್‌ಜಿಹಾದ್‌ಗಳಿಗೆ ತೆರೆ ಎಳೆಯಲು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಎಲ್ಲರೂ ಕಾನೂನನ್ನು ಪಾಲಿಸಲೇಬೇಕು. ಲವ್‌ಜಿಹಾದ್ ಹೊಸದೇನೂ ಅಲ್ಲ, ಮೊದಲಿನಿಂದಲೂ ಇದೆ, ಅದನ್ನು ತಡೆಯಲು ಕಾನೂನನ್ನು ರೂಪಿಸಿದ್ದೇವೆ. ಅದನ್ನು ಪಾಲಿಸಲೇಬೇಕು ಎಂದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಜೂನ್ 24 ರಿಂದ 26 : ಜಯದೇವದಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ