ಹುಚ್ಚಗಣಿ ಮಹದೇವ ದೇವಸ್ಥಾನ ಶಂಕುಸ್ಥಾಪನೆಗೆ ಸಿಎಂ ಆಗಮನ; ಪ್ರತಾಪ್‌ಸಿಂಹ!

ಮೈಸೂರು: ನಂಜನಗೂಡಿನ ಹುಚ್ಚಗಣಿಯ ಮಹದೇವಮ್ಮ ದೇವಸ್ಥಾನದ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಬರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರು ಸೇರಿದಂತೆ ರಾಜ್ಯದ ಹಿಂದೂ ದೇವಾಲಯಗಳ ರಕ್ಷಣೆ ವಿಚಾರದಲ್ಲಿ ದಾವಣಗೆರೆಯಲ್ಲಿ ಇಂದು ನಡೆದ ಬಿಜೆಪಿ ಕಾರ್ಯಕಾರಿಣಿ ವೇಳೆ ಅನೌಪಚಾರಿಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿದಾಗ, ರಾಜ್ಯದ ಹಿಂದೂ ದೇವಾಲಯಗಳ ರಕ್ಷಣೆ ವಿಚಾರದಲ್ಲಿ ಸರಕಾರ ಬದ್ಧತೆ ಹೊಂದಿದೆ. ಕೇವಲ ಬಾಯಿ ಮಾತಿನಲ್ಲಿ ನಮ್ಮ ಬದ್ಧತೆ ಪ್ರದರ್ಶಿಸದೆ ಕಾನೂನಾತ್ಮಕ ವಾಗಿ ದೇವಸ್ಥಾನ ಗಳ ರಕ್ಷಣೆಗೆ ಸರ್ಕಾರ ಮುಂದಾಗಲಿದೆ.

ಒಂದೆರಡು ದಿನದಲ್ಲಿ ಕಾನೂನಿನ ವಿವರವನ್ನು ರಾಜ್ಯದ ಜನರಿಗೆ ತಿಳಿಸಲಿದ್ದೇನೆ ಎಂದು ಹೇಳಿದರು.

× Chat with us