ಉತ್ತರಾಖಂಡ: ಮೇಘಸ್ಫೋಟಕ್ಕೆ ಇಬ್ಬರು ಬಲಿ

ಉತ್ತರಾಖಂಡ​​: ಧರ್ಚುಲಾದ ಜುಮ್ಮಾ ಗ್ರಾಮದಲ್ಲಿ ಮೇಘಸ್ಫೋಟದಿಂದಾಗಿ ಇಬ್ಬರು ಸಾವಿಗೀಡಾಗಿದ್ದಾರೆ.

ದುರಂತದಲ್ಲಿ ಏಳು ಮನೆಗಳು ನೆಲಸಮವಾಗಿವೆ. ಅವಶೇಷಗಳಡಿ 5ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ. ಮೇಘ ಸ್ಫೋಟದ ಪರಿಣಾಮವಾಗಿ ಎನ್​ಎಚ್​ಪಿ ಕಾಲೊನಿ, ತಪೋವನದವರೆಗೂ ಜಲಾವೃತವಾಗಿದೆ ಎಂದು ತಿಳಿದುಬಂದಿದೆ.

ದುರ್ಘಟನೆ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಮಿ ಟ್ವೀಟ್​ ಮಾಡಿ, ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

× Chat with us