ಚೀನಾ: ಯಶಸ್ವಿಯಾಗಿ ಮಂಗಳನ ಅಂಗಳಕ್ಕಿಳಿದ ರೋವರ್‌ ʻಜು ರಾಂಗ್‌ʼ

ಬೀಜಿಂಗ್: ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್‌ಎಸ್‌ಎ) ಉಡಾವಣೆ ಮಾಡಿದ್ದ ರೋವರ್‌ ʻಜು ರಾಂಗ್‌ʼ ಯಶಸ್ವಿಯಾಗಿ ಮಂಗಳ ಗ್ರಹವನ್ನು ತಲುಪಿದೆ.

ಏಳು ತಿಂಗಳು ಬಾಹ್ಯಾಕಾಶ ಪ್ರಯಾಣ, ಮೂರು ತಿಂಗಳು ಅಂತರೀಕ್ಷ ಯಾನ ಹಾಗೂ ಒಂಬತ್ತು ನಿಮಿಷಗಳ ದೋಷವನ್ನೂ ಎದುರಿಸಿ ಕೊನೆಗೂ ಚೀನಾದ ರೋವರ್‌ ಮಂಗಳ ಗ್ರಹವನ್ನು ಸ್ಪರ್ಷಿಸಿದೆ ಎಂದು ವೈಜ್ಞಾನಿಕ ಸಂಶೋಧನಾ ತಂಡ ದೃಢಪಡಿಸಿದೆ. ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಉಪಗ್ರಹ ಕಳುಹಿಸಿದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ.

ಗ್ರಹದ ಮೇಲ್ಮೈ ಮತ್ತು ವಾತಾವರಣವನ್ನು ಈ ರೋವರ್‌ ಅಧ್ಯಯನ ಮಾಡಲಿದೆ.

× Chat with us