ವುಹಾನ್‌ ನಗರದಲ್ಲಿ ತನಿಖೆ ನಡೆಸಲು ಚೀನಾ ಅಡ್ಡಿ, ಅನುಮಾನ ಮೂಡಿಸಿದ ಡ್ರ್ಯಾಗನ್‌ ನಡೆ

ಜೂರಿಚ್‌(ಜಿನೇವಾ): ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾದ ವುಹಾನ್‌ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ಅಲ್ಲಿನ ಅಧಿಕಾರಿಗಳ ವಿರುದ್ಧ ಡಬ್ಲುಹೆಚ್‌ಒ ಬೇಸರ ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ವಿಶ್ವಸಸಂಸ್ಥೆ ಅಧ್ಯಕ್ಷ ಟೆಡ್ರೊಸ್‌ ಅದನೊಮ್‌ ಘೆಬ್ರೆಯಿಸಸ್‌ ಚೀನಾದ ಈ ನಡೆಯು ಬಹಳ ಬೇಸರ ತಂದಿದೆ. ಖಂಡಿತವಾಗಿಯೂ ನಾವು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ವೈರಸ್‌ ಜನ್ಮ ತಾಳಿದ ವುಹಾನ್‌ ಪಟ್ಟಣದಲ್ಲಿ ತನಿಖೆ ನಡೆಸುವ ಸಲವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಒಂದು ತನಿಖೆ ಹಮ್ಮಿಕೊಂಡಿದೆ. ಅದನ್ನು ಪೂರೈಸಲು ಅಂತರ ರಾಷ್ಟ್ರೀಯ ತಂಡಕ್ಕೆ ಚೀನಾ ಅಧಿಕಾರಿಗಳು ಪ್ರವೇಶ ನಿರ್ಬಂಧಿಸಿದ್ದಾರೆ.

ಚೀನಾದ ಈ ನಡೆಯು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಏನೋ ಮುಚ್ಚಿಡುತ್ತಿದೆ ಎಂದು ಹೇಳಲಾಗುತ್ತಿದೆ.

× Chat with us