BREAKING NEWS

ಮಕ್ಕಳ ಕಳ್ಳಸಾಗಣೆ: ಉತ್ತರ ಪ್ರದೇಶ ದೇಶಕ್ಕೆ ನಂ.1, ಕರ್ನಾಟಕಕ್ಕೆ 4ನೇ ಸ್ಥಾನ.!

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಂತರ ಭಾರತದ ವಿವಿಧ ರಾಜ್ಯಗಳಲ್ಲಿನ ಮಕ್ಕಳ ಸಾಗಣೆ ಹೆಚ್ಚಾಗಿದ್ದು, ಹೆಚ್ಚು ಮಕ್ಕಳ ಸಾಗಣೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಟಾಪ್ 3 ರಲ್ಲಿದ್ದು, ಕರ್ನಾಟಕ 4ನೇ ಸ್ಥಾನದಲ್ಲಿದೆ.

ಈ ಬಗ್ಗೆ ಗೇಮ್ಸ್ 24/7 ಮತ್ತು ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್ (ಕೆಎಸ್‌ಸಿಎಫ್) ಸಂಸ್ಥೆಗಳು ಜಂಟಿಯಾಗಿ ನಡೆಸಿದ ‘ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ ವರದಿ’ಯಲ್ಲಿ ಈ ಅಂಶ ಉಲ್ಲೇಖವಾಗಿದ್ದು, ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರಪ್ರದೇಶ ಮೂರು ರಾಜ್ಯಗಳು 2016 ಮತ್ತು 2022 ರ ನಡುವೆ ಗರಿಷ್ಠ ಸಂಖ್ಯೆಯ ಮಕ್ಕಳ ಕಳ್ಳಸಾಗಣೆ ವರದಿಯಾಗಿದೆ ಎಂದು ತಿಳಿಸಿದೆ.

ಅಧ್ಯಯನದ ಪ್ರಕಾರ, ಉತ್ತರ ಪ್ರದೇಶದಲ್ಲಿ ಕೋವಿಡ್ ಪೂರ್ವ ಹಂತದಲ್ಲಿ (2016-2019) 267 ಮಕ್ಕಳ ಸಾಗಣೆ ಪ್ರಕರಣಗಳು ವರದಿಯಾಗಿದ್ದರೆ, ಕೋವಿಡ್ ನಂತರದ ಹಂತದಲ್ಲಿ (2021-2022) 1,214 ಪ್ರಕರಣಗಳು ದಾಖಲಾಗಿವೆ. ಪಟ್ಟಿಯ 2ನೇ ಸ್ಥಾನದಲ್ಲಿ ಬಿಹಾರ ಇದ್ದು, ಇಲ್ಲಿ ಕೋವಿಡ್ ಪೂರ್ವದಲ್ಲಿ 543 ಮತ್ತು ಕೋವಿಡ್ ನಂತರದಲ್ಲಿ 703 ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ವರದಿಯಾಗಿವೆ. 3ನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶದಲ್ಲಿ ಕೋವಿಡ್ ಪೂರ್ವದಲ್ಲಿ 50 ಪ್ರಕರಣಗಳು ದಾಖಲಾಗಿದ್ದರೆ, ಕೋವಿಡ್ ನಂತರದಲ್ಲಿ 210 ಪ್ರಕರಣಗಳು ದಾಖಲಾಗಿವೆ.

4ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಕೋವಿಡ್ ಪೂರ್ವದಲ್ಲಿ 6 ಮಕ್ಕಳ ಸಾಗಣೆ ಪ್ರಕರಣಗಳು ದಾಖಲಾಗಿದ್ದರೆ ಕೋವಿಡ್ ನಂತರದಲ್ಲಿ 110 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕವು ಸಾಂಕ್ರಾಮಿಕ ರೋಗದ ಪೂರ್ವದಿಂದ ನಂತರದ ದಿನಗಳ ಅಂಕಿಅಂಶಗಳಿಂದ ಮಕ್ಕಳ ಕಳ್ಳ ಸಾಗಣೆಯಲ್ಲಿ 18 ಪಟ್ಟು ಹೆಚ್ಚಳ ಕಂಡಬಂದಿದೆ.

KSCF ನ MD ರಿಯರ್ ಅಡ್ಮಿರಲ್ ರಾಹುಲ್ ಕುಮಾರ್ ಶ್ರಾವತ್ ಅವರು ಈ ಬಗ್ಗೆ ಮಾತನಾಡಿ, “ಸಂಖ್ಯೆಗಳು ಕಠೋರ ಮತ್ತು ಚಿಂತಾಜನಕವಾಗಿ ಕಾಣುತ್ತಿದ್ದರೂ ಸಹ, ಕಳೆದ ಒಂದು ದಶಕದಲ್ಲಿ ಭಾರತವು ಮಕ್ಕಳ ಕಳ್ಳಸಾಗಣೆಯಲ್ಲಿ ವ್ಯವಹರಿಸಿದ ರೀತಿಯನ್ನು ನಿರಾಕರಿಸಲಾಗುವುದಿಲ್ಲ. ಸರ್ಕಾರ ಮಾನವ ಕಳ್ಳಸಾಗಣೆ ಮತ್ತು ಮಕ್ಕಳ ಕಳ್ಳ ಸಾಗಣೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೂ ಮತ್ತಷ್ಟು ಕಠಿಣ ಕಾನೂನುಗಳ ಮೂಲಕ ಇವುಗಳನ್ನು ನಿಯಂತ್ರಿಸುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತ್ವರಿತ ಮತ್ತು ಆಗಾಗ್ಗೆ ಮಧ್ಯಪ್ರವೇಶ, ಹಾಗೆಯೇ ರೈಲ್ವೆ ರಕ್ಷಣಾ ಪಡೆ ಮತ್ತು ಗಡಿ ಭದ್ರತಾ ಪಡೆಗಳಂತಹ ಕಾನೂನು ಜಾರಿ ಸಂಸ್ಥೆಗಳು ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ ಮತ್ತು ಜಾಗೃತಿ ಮೂಡಿಸುವ ಮೂಲಕ ಕಳ್ಳಸಾಗಣೆಗೆ ಒಳಗಾದ ಮಕ್ಕಳ ಸಂಖ್ಯೆಯನ್ನು ಮೊಟಕುಗೊಳಿಸಿದೆ ಮತ್ತು ಆದಾಗ್ಯೂ ಅಂಕಿಅಂಶಗಳ ಸಂಖ್ಯೆಯಲ್ಲಿ ಗೋಚರ ಏರಿಕೆಗೆ ಅಧಿಕಾರಿಗಳ ಕರ್ತವ್ಯಲೋಪ ಕಾರಣವಾಗಿದೆ. ರಾಜಸ್ಥಾನದ ಜೈಪುರ ನಗರವು ಮಕ್ಕಳ ಕಳ್ಳಸಾಗಣೆಯ ತಾಣವಾಗಿ ಹೊರಹೊಮ್ಮಿದೆ ಎಂದು ವರದಿ ಹೇಳಿದೆ.

13 ರಿಂದ 18 ವರ್ಷದೊಳಗಿನ ಗರಿಷ್ಠ ಸಂಖ್ಯೆಯ ಮಕ್ಕಳು ಹೆಚ್ಚಿನ ಕೈಗಾರಿಕೆಗಳಿಂದ ತೊಡಗಿಸಿಕೊಂಡಿದ್ದರೆ, ಸೌಂದರ್ಯವರ್ಧಕ ಉದ್ಯಮವು 5-8 ವರ್ಷದೊಳಗಿನ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ. ರಕ್ಷಿಸಲ್ಪಟ್ಟ ಮಕ್ಕಳ ಪೈಕಿ ಸುಮಾರು 80 ಪ್ರತಿಶತದಷ್ಟು ಮಕ್ಕಳು 13-18 ವರ್ಷ ವಯಸ್ಸಿನೊಳಗಿನವರು ಎಂದು ವರದಿ ಹೇಳುತ್ತದೆ. ರಕ್ಷಿಸಲ್ಪಟ್ಟ ಮಕ್ಕಳಲ್ಲಿ 80 ಪ್ರತಿಶತ ಮಕ್ಕಳು 13-18 ವರ್ಷ ವಯಸ್ಸಿನ ಹದಿಹರೆಯದವರಾಗಿದ್ದರೆ, 13 ಪ್ರತಿಶತ ಮಕ್ಕಳು 9-12 ವರ್ಷ ವಯಸ್ಸಿನವರು ಮತ್ತು 2 ಪ್ರತಿಶತಕ್ಕಿಂತ ಹೆಚ್ಚು 9 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವರದಿಯಿಂದ ತಿಳಿದುಬಂದಿದೆ.

andolanait

Recent Posts

ಹನೂರು| ಉಪಟಳ ನೀಡುತ್ತಿರುವ ಕಾಡಾನೆ ಸೆರೆ ಹಿಡಿಯಿರಿ: ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರ ಮನವಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಕಾಡಾನೆ ಬೆಳೆ ಹಾನಿ ಮಾಡುವುದರ ಜೊತೆಗೆ ಮನುಷ್ಯರ ಜೀವದ ಜೊತೆ…

2 hours ago

ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧ: ಟಿ.ನರಸೀಪುರ ಬಂದ್‌ ಮಾಡಲು ಚಿಂತನೆ

ಟಿ.ನರಸೀಪುರ: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ತೀವ್ರ ತೆರನಾದ…

2 hours ago

ಹನೂರು ಪಟ್ಟಣದಲ್ಲಿ 50 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ: ಶಾಸಕರಿಂದ ಕಾಮಗಾರಿ ಪರಿಶೀಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದಲ್ಲಿ ನಿರ್ಮಾಣ ಮಾಡುತ್ತಿರುವ 50 ಹಾಸಿಗೆಗಳ ನೂತನ ಆಸ್ಪತ್ರೆಯು ಸಾರ್ವಜನಿಕರಿಗೆ…

2 hours ago

ಹನೂರು| ಪ್ರತಿನಿತ್ಯ ಒಂಟಿಸಲಗ ದಾಳಿ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ-ಒಡೆಯರಪಾಳ್ಯ ಮಾರ್ಗ ಮಧ್ಯದ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ…

2 hours ago

ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ: ಅಜ್ಜೀಪುರ ಗ್ರಾಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ತಾಲೂಕಿನ ಕುಡಿಯುವ ನೀರಿನ ದಾಹ ಇಂಗಿಸಲು ಕೆರೆಕಟ್ಟೆಗಳು, ಜನಜಾನುವಾರುಗಳಿಗೆ ಸಮರ್ಪಕ…

3 hours ago

ಬೆಳಗಾವಿ-ಮುಂಬೈ ಇಂಡಿಗೋ ವಿಮಾನ ಸೇವೆ: ದಿನಾಂಕ ಫಿಕ್ಸ್‌

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಈಡೇರಿದೆ. ಬೆಳಗಾವಿ ಮತ್ತು ನವಿ ಮುಂಬೈ ನಡುವೆ ನೇರ ವಿಮಾನ…

3 hours ago