ಆರ್‌ಎಸ್‌ಎಸ್‌ ಟೂಲ್‌ಕಿಟ್‌ನಲ್ಲಿ ಅದೆಷ್ಟು ದೇಶದ್ರೋಹದ ಕೆಲಸಗಳಿವೆಯೋ!

ಮೈಸೂರು: ರೈತರ ಹೋರಾಟದ ಟೂಲ್‌ಕಿಟ್‌ ಅಂದರೆ, ದೈನಂದಿನ ಚಟುವಟಿಕೆಗಳ ರೂಪುರೇಷೆಗಳಷ್ಟೇ. ಆದರೆ ಅದನ್ನು ಬಿಜೆಪಿ ಮುಖಂಡರು ದೇಶದ್ರೋಹವೆಂಬಂತೆ ಬಿಂಬಿಸಿದ್ದಾರೆ. ಆರ್‌ಎಸ್‌ಎಸ್‌ ಟೂಲ್‌ಕಿಟ್‌ ಪರಿಶೀಲಿಸಿದರೆ, ಅದರಲ್ಲಿ ಅದೆಷ್ಟು ದೇಶದ್ರೋಹದ ಕೆಲಸಗಳಿವೆ ಎಂಬುದು ತಿಳಿಯುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

mys

ನಗರದ ಇಂದಿರಾಗಾಂಧಿ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ ಹೋರಾಟದ ಬದಲು ಬಿಜೆಪಿ, ಆರ್‌ಎಸ್‌ಎಸ್‌ ಟೂಲ್‌ಕಿಟ್‌ಗಳನ್ನು ಪರಿಶೀಲಿಸಬೇಕು. ಅಲ್ಲದೆ, ಬಿಜೆಪಿ ಐಟಿ ಸೆಲ್‌ಗಳನ್ನು ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸಿದರು.

೨೦೧೪ರಿಂದ ಈವರೆಗೂ ಕೇಂದ್ರ ಸರ್ಕಾರ ದೇಶದಲ್ಲಿ ೮೦೦ ಮಂದಿಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿದೆ. ಆದರೆ ಸರಿಯಾದ ಪುರಾವೆ ಸಿಕ್ಕಿ ಚಾರ್ಜ್‌ಶೀಟ್ ಆಗಿರುವುದು ಮಂದಿ ಮೇಲೆ ಮಾತ್ರವೇ. ಜನರ ಧ್ವನಿಯನ್ನು ಧಮನ ಮಾಡುವುದಕ್ಕೇ ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಗರ ಸೇವಾದಳದ ಅಧ್ಯಕ್ಷ ಗಿರೀಶ್, ಮಹೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

× Chat with us