ಕೋವಿಡ್:‌ ಚಾಮರಾಜನಗರ ಟಾಸ್ಕ್‌ ಫೋರ್ಸ್‌ಗೆ ಇಬ್ಬರು ಐಎಫ್‌ಎಸ್‌ ಅಧಿಕಾರಿಗಳು

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ಬಿಕ್ಕಟ್ಟು ನಿರ್ವಹಿಸಲು ಜಿಲ್ಲಾಡಳಿತ ಟಾಸ್ಕ್‌ ಫೋರ್ಸ್‌ ರಚಿಸಿದ್ದು, ಇಬ್ಬರು ಐಎಫ್‌ಎಸ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಲೆ ಮಹದೇಶ್ವರ ವನ್ಯಜೀವಿ ಡಿಸಿಎಫ್‌ ಏಡುಕುಂಡಲ ಅವರನ್ನು ಆಮ್ಲಜನಕ ಸರಬರಾಜು ವಿಭಾಗದ ನೋಡೆಲ್‌ ಅಧಿಕಾರಿಯನ್ನಾಗಿ ಹಾಗೂ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಡಿಸಿಎಫ್‌ ಸಂತೋಷ್‌ ಕುಮಾರ್‌ ಅವರನ್ನು ಜಿಲ್ಲಾಸ್ಪತ್ರೆಯ ನೋಡೆಲ್‌ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಜಿಲ್ಲಾಮಟ್ಟದ ಟಾಸ್ಕ್‌ ಫೋರ್ಸ್‌ ಜಿಲ್ಲಾಧಿಕಾರಿ, ಡಿಎಚ್‌ಒ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸಿಐಎಂಎಸ್‌), ಎಸ್‌ಪಿ, ಎಂಎಲ್‌ಎ ಸೇರಿದಂತೆ ಒಟ್ಟು 15 ಮಂದಿಯನ್ನು ಒಳಗೊಂಡಿರುತ್ತದೆ.

× Chat with us