ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಕೆಸಿಇಟಿ 2023 ಫಲಿತಾಂಶ ಪ್ರಕಟಿಸಲಾಗಿದ್ದು.ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರು ಕುಮರನ್ಸ್ ಚಿಲ್ಡರ್ನ್ ಹೋಂನ ಮೂರು ವಿಷಯಗಳಲ್ಲಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಬೆಂಗಳೂರು ಮಹೇಶ್ ಪಿಯು ಕಾಲೇಜಿನ ಮಾಲವಿಕಾ ಕಪೂರ್ ಎರಡು ವಿಷಯದಲ್ಲಿ ಟಾಪರ್ ಎನ್ನಿಸಿದ್ದಾರೆ.
ಪ್ರತೀಕ್ಷಾ ಬಿ ಫಾರ್ಮ, ಡಿ ಫಾರ್ಮ ಹಾಗೂ ನ್ಯಾಚುರೋಪತಿ ಹಾಗೂ ಯೋಗ ಸೈನ್ಸ್‌ನಲ್ಲಿ ಹೆಚ್ಚು ಅಂಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಮಾಲವಿಕ ಕಪೂರ್ ಬಿಎಸ್ಸಿ ನರ್ಸಿಂಗ್ ಹಾಗೂ ಬಿವಿಎಸ್ಸಿ ಯಲ್ಲಿ ಟಾಪರ್ ಆಗಿದ್ದಾರೆ.
ಬೆಂಗಳೂರು ಕುಮರನ್ ಚಿಲ್ಡ್ರನ್ಸ್ ಹೋಂನ ವಿಘ್ನೇಶ್ ನಟರಾಜ್ ಕುಮಾರ್ ಗೆ ಎಂಜಿನಿಯರಿಂಗ್ ನಲ್ಲಿ ಮೊದಲ ಸ್ಥಾನ ಲಭಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ನಟರಾಜ್ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಗಳಿಸಿದ್ದ ವಿಘ್ನೇಶ್, ಸಿಇಟಿಯಲ್ಲಿ 96.111 ಅಂಕ ಪಡೆದಿದ್ದರು. ಎರಡರ ಸರಾಸರಿಯಲ್ಲಿ ಇವರು 97.111 ಅಂಕ ತಮ್ಮದಾಗಿಸಿಕೊಂಡಿದ್ದಾರೆ.
ಬಿಎಸ್ಸಿ ಅಗ್ರಿಯಲ್ಲಿ ಮಂಗಳೂರು ಎಕ್ಸ್‌ಪರ್ಟ್ ಕಾಲೇಜಿನ ಎಸ್.ಎಚ್.ಭೈರಶ್ ಟಾಪರ್ ಎನ್ನಿಸಿದ್ದಾರೆ.
ಮಂಗಳೂರು, ಉಡುಪಿ, ಹುಬ್ಬಳ್ಳಿ, ದಾವಣಗೆರೆ, ಬೀದರ್, ರಾಯಚೂರು ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಟಾಪರ್‌ಗಳ ಪಟ್ಟಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು.
ಕರ್ನಾಟಕದಲ್ಲಿ ಈ ವರ್ಷ ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಎಂಜಿನಿಯರ್‌ಗೆ 2,03,381, ಕೃಷಿ ವಿಜ್ಞಾನಕ್ಕೆ 1,64,187, ಪಶುಸಂಗೋಪನೆಗೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 1,66,74, ಬಿಫಾರ್ಮಾಕ್ಕೆ 1,06,191, ಡಿ ಫಾರ್ಮಾಕ್ಕೆ 1,06,340 ವಿದ್ಯಾರ್ಥಿಗಳು ಅರ್ಹತೆ ಗಳಿಸಿದ್ದಾರೆ ಎಂದು ಸಚಿವ ಡಾ ಎಂಸಿ ಸುಧಾಕರ ಹೇಳಿದರು.
ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ 60ಕ್ಕೆ 60 ಅಂಕಗಳನ್ನು ಯಾರೂ ಪಡೆದಿಲ್ಲ. ಗಣಿತದಲ್ಲಿ 4 ಮಂದಿ, ಜೀವಶಾಸ್ತ್ರದಲ್ಲಿ 135 ಅಭ್ಯರ್ಥಿಗಳು 60ಕ್ಕೆ 60 ಅಂಕಗಳನ್ನು ಪಡೆದಿದ್ದಾರೆ. ಎಲ್ಲ ಕೋರ್ಸ್‌ಗಳಲ್ಲಿ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಗಳಿಸಿದ್ದಾರೆ ಎಂದು ಸಚಿವರು ಹೇಳಿದರು.
ಟಾಪರ್ ಎಂಜಿನಿಯರಿಂಗ್
1. ವಿಘ್ನೇಶ್ ನಟರಾಜ್ ಕುಮಾರ್ ಕುಮರನ್ ಚಿಲ್ಡ್ರನ್ಸ್ ಹೋಂ ಉತ್ತರಹಳ್ಳಿ ಬೆಂಗಳೂರು
2. ಅರ್ಜುನ್ ಕೃಷ್ಣಸ್ವಾಮಿ ಆರ್‌ವಿ ಪಿಯು ಕಾಲೇಜು ಜಯನಗರ ಬೆಂಗಳೂರು
3. ಸಮೃದ್ದ್ ಶೆಟ್ಟಿ ವಿದ್ಯಾ ನಿಕೇತನ ಪಿಯು ಕಾಲೇಜು ಹುಬ್ಬಳ್ಳಿ
4. ಎಸ್ ಎಸ್ ಸುಮೇಧ್ ಜಿಂದಾಲ್ ವಿದ್ಯಾ ಮಂದಿರ ತೋರಣಗಲ್ಲು ಬಳ್ಳಾರಿ
5. ಮಾಧವ್ ಸೂರ್ಯ ತಡೇಪಲ್ಲಿ ನಾರಾಯಣ ಈ ಟೆಕ್ನೋ ಸ್ಕೂಲ್ ಮಾರತ್ತಹಳ್ಳಿ ಬೆಂಗಳೂರು
6. ಸುಜಿತ್ ಅಡಿಗ ಆರ್‌ವಿ ಪಿಯು ಕಾಲೇಜು ಬೆಂಗಳೂರು
7. ಉಜ್ವಲ್ ಎಲ್ ಶಂಕರ್ ನಾರಾಯಣ ಒಲಂಪಿಯಾಡ್ ಸಹಕಾರ ನಗರ ಬೆಂಗಳೂರು
8. ರಿಶಿತ್ ಗುಪ್ತ ಅಲೈನೆ ಪಬ್ಲಿಕ್ ಶಾಲೆ ಕನಕಪುರ ರಸ್ತೆ ಬೆಂಗಳೂರು
9. ಅಭಿನವ್ ದೀಕ್ಷಾ ಪಿಯುಉ ಕಾಲೇಜು ತಲಘಟ್ಟಪುರ ಬೆಂಗಳೂರು
10. ಭುವನ್ ಕೆ.ಪ್ರಸಾದ್ ದೀಕ್ಷಾ ಕಾಲೇಜು ತಲಘಟ್ಟಪುರ ಬೆಂಗಳೂರು
ಟಾಪರ್ ನ್ಯಾಚುರೋಪತಿ ಹಾಗೂ ಯೋಗ ಸೈನ್ಸ್
1. ಆರ್.ಪ್ರತೀಕ್ಷಾ ಕುಮರನ್ ಚಿಲ್ಡ್ರನ್ಸ್ ಹೋಂ ಪದ್ಮನಾಭನಗರ ಬೆಂಗಳೂರು
2. ಎಸ್ ಎಚ್.ಭೈರೇಶ್ ಎಕ್ಸ್‌ಪರ್ಟ್ ಪಿಯು ಕಾಲೇಜು ಮಂಗಳೂರು
3. ಎಂ. ಎಚ್. ಸೃಜನ್ ಬೇಸ್ ಪಿಯು ಕಾಲೇಜು ಅಕ್ಷಯ ಕಾಲೋನಿ ಹುಬ್ಬಳ್ಳಿ
4. ಕಾರ್ತಿಕ ಮನೋಹರ್ ಸಿಂಹಾಸನ್ ಲೇಡಿ ಅನುಸೂಯ ಅಕಾಡೆಮಿ ರಾಜಸ್ಥಾನ
5. ಮಾಲವಿಕಾ ಕಪೂರ್ ಮಹೇಶ್ ಪಿಯು ಕಾಲೇಜು ಚಾಮರಾಜಪೇಟೆ ಬೆಂಗಳೂರು
6. ಎ ಪ್ರತೀಕ್ಷ ಚೈತನ್ಯ ಪಿಯು ಕಾಲೇಜು ರಾಜಾಜಿನಗರ ಬೆಂಗಳೂರು
7. ಎಂ ವೈಶಾಖ್ ಎಕ್ಸಲೆಂಟ್ ಪಿಯುಕಾಲೇಜು ಮೂಡಬಿದ್ರೆ
8. ಆಕಾಶ್ ಗೋವಿಂದಯ್ಯ ಚೈತನ್ಯ ಪಿಯು ಕಾಲೇಜು ನಾಗರಬಾವಿ ಬೆಂಗಳೂರು
9. ಸಾತ್ವಿಕ್ ಕುಲಕರ್ಣಿ ಮಿರಾಂಡ ಜೂನಿಯರ್ ಕಾಲೇಜು ಇಂದಿರಾನಗರ ಬೆಂಗಳೂರು
10. ಶ್ರೀನಿವಾಸ ಬಸನಗೌಡ ಮಾಲೀ ಪಾಟೀಲ ಸರ್ ಎಂವಿ ಪಿಯು ಕಾಲೇಜು ದಾವಣಗೆರೆ
ಟಾಪರ್ ಬಿಎಸ್ಸಿ ಕೃಷಿ
1. ಎಚ್ ಎಚ್ ಭೈರೇಶ್ ಎಕ್ಸಪರ್ಟ್ ಪಿಯು ಕಾಲೇಜು ಮಂಗಳೂರು
2. ಅನುರಾಗ್ ರಂಜನ್ ಪಮಾಣ ಪಿಯು ಕಾಲೇಜು ರಾಯಚೂರು
3. ಕಾರ್ತಿಕ ಮನೋಹರ್ ಸಿಂಹಾಸನ್ ಲೇಡಿ ಅನುಸೂಯ ಅಕಾಡೆಮಿ ರಾಜಸ್ಥಾನ
4. ಪಸ್ಪಲೇಟಿ ಧೃವ ಶಿವಕಾಂತ್ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಜೆಪಿನಗರ ಬೆಂಗಳೂರು
5. ಶ್ರೀನಿವಾಸ ಬಸನಗೌಡ ಮಾಲೀಪಾಟೀಲ ಸರ್ ಎಂವಿ ಪಿಯು ಕಾಲೇಜು ದಾವಣಗೆರೆ
6. ಪ್ರಣವ್ ಗುಜ್ಜರ್ ಕಾರ್ಕಳ ಜ್ಞಾನಸುಧಾ ಕಾಲೇಜು ಕುಕ್ಕಂದೂರು ಉಡುಪಿ
7. ಎನ್ ಪ್ರೀತಂ ವಿದ್ಯಾಮಂದಿರ ಪಿಯುಕಾಲೇಜು ಮಲ್ಲೇಶ್ವರಂ ಬೆಂಗಳೂರು
8. ಪ್ರಣವ್ ಆರ್ ಭಟ್ ವೆಂಕಟ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ್ ರಾಜಾಜಿನಗರ ಬೆಂಗಳೂರು
9. ಉಜ್ವಲ್ ಎಲ್ ಶಂಕರ್ ನಾರಾಯಣ ಒಲಂಪಿಯಾಡ್ ಸ್ಕೂಲ್ ಸಹಕಾರ ನಗರ ಬೆಂಗಳೂರು
10. ಸಾತ್ವಿಕ್ ಕುಲಕರ್ಣಿ ಮಿರಿಂಡಾ ಜೂನಿಯರ್ ಕಾಲೇಜು ಇಂದಿರಾನಗರ ಬೆಂಗಳೂರು
ಟಾಪರ್ ಬಿವಿಎಸ್ಸಿ
1. ಮಾಲವಿಕಾ ಕಪೂರ್ ಮಹೇಶ್ ಪಿಯು ಕಾಲೇಜು ಚಾಮರಾಜಪೇಟೆ ಬೆಂಗಳೂರು
2. ಆರ್.ಪ್ರತೀಕ್ಷಾ ಕುಮರನ್ ಚಿಲ್ಡ್ರನ್ಸ್ ಹೋಂ ಪದ್ಮನಾಭನಗರ ಬೆಂಗಳೂರು
3. ಚಂದನ್‌ಗೌಡ ಸಿ ಎನ್ ಮಹೇಶ್ ಪಿಯು ಕಾಲೇಜು ಚಾಮರಾಜಪೇಟೆ ಬೆಂಗಳೂರು
4. ಎಚ್ ಎಚ್ ಭೈರೇಶ್ ಎಕ್ಸಪರ್ಟ್ ಪಿಯು ಕಾಲೇಜು ಮಂಗಳೂರು
5. ಕಾರ್ತಿಕ ಮನೋಹರ್ ಸಿಂಹಾಸನ್ ಲೇಡಿ ಅನುಸೂಯ ಅಕಾಡೆಮಿ ರಾಜಸ್ಥಾನ
6. ಎಂ. ಎಚ್. ಸೃಜನ್ ಬೇಸ್ ಪಿಯು ಕಾಲೇಜು ಅಕ್ಷಯ ಕಾಲೋನಿ ಹುಬ್ಬಳ್ಳಿ
7. ಆದಿತ್ಯ ಶಹೀನ್ ಕಾಲೇಜು ಬೀದರ್
8. ಆದರ್ಶ್ ಸಜ್ಜನ್ ಶ್ರೀ ರಾಮಗ್ಲೋಬಲ್ ಕಾಲೇಜು ಸಮೇತನಹಳ್ಳಿ ಬೆಂಗಳೂರು
9. ಎ ಪ್ರತೀಕ್ಷ ಚೈತನ್ಯ ಪಿಯು ಕಾಲೇಜು ರಾಜಾಜಿನಗರ ಬೆಂಗಳೂರು
10. ಆಕಾಶ್ ಗೋವಿಂದಯ್ಯ ಚೈತನ್ಯ ಪಿಯು ಕಾಲೇಜು ನಾಗರಬಾವಿ ಬೆಂಗಳೂರು
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…