BREAKING NEWS

ನೀಟ್ ಹಾಗೂ ಪ್ರತಿಭೆ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಕೇಂದ್ರವೇ ಒಪ್ಪಿಕೊಂಡಿದೆ: ಸಿಎಂ ಸ್ಟಾಲಿನ್

ಚೆನ್ನೈ: ನೀಟ್ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ನೀಟ್ ನಿಂದ ಯಾವುದೇ ಪ್ರಯೋಜನ ಇಲ್ಲ. ನೀಟ್ ಹಾಗೂ ಪ್ರತಿಭೆ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ನೀಟ್ ಕುರಿತಂತೆ ತನ್ನ ಪುತ್ರ ಹಾಗೂ ರಾಜ್ಯ ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗದುಕೊಂಡ ಒಂದು ದಿನದ ಬಳಿಕ ಸ್ಟಾಲಿನ್, ನೀಟ್ ಪ್ರಯೋಜನ ಶೂನ್ಯ ಎಂಬುದನ್ನು ಕೇಂದ್ರದ ಬಿಜೆಪಿ ಸರ್ಕಾರವೇ ಒಪ್ಪಿಕೊಂಡಿದೆ ಎಂದಿದ್ದಾರೆ. ‘ಎಕ್ಸ್’ ನಲ್ಲಿ ಸ್ಟಾಲಿನ್, ‘‘ನೀಟ್ ಪಿಜಿ ಕಟ್ ಆಫ್ ಅನ್ನು ಶೂನ್ಯಕ್ಕೆ ಇಳಿಸುವ ಮೂಲಕ ಅವರು ನೀಟ್ ನಲ್ಲಿ ಅರ್ಹತೆಗೆ ಅರ್ಥವಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಈ ಪರೀಕ್ಷೆಯನ್ನು ಕೇವಲ ಕೋಚಿಂಗ್ ಸೆಂಟರ್ ಗಾಗಿ ಹಾಗೂ ಪರೀಕ್ಷೆ ಶುಲ್ಕ ಪಾವತಿಸುವುದಕ್ಕೆ ಮಾತ್ರ ನಡೆಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಅರ್ಹತೆ ಅಗತ್ಯವಿಲ್ಲ’’ ಎಂದಿದ್ದಾರೆ.

ಹಲವು ಅಮೂಲ್ಯ ಜೀವಗಳನ್ನು ಕಳೆದುಕೊಂಡ ಹೊರತಾಗಿಯೂ ಕೇಂದ್ರದ ಬಿಜೆಪಿ ಸರ್ಕಾರ ಹೃದಯ ಹೀನವಾಗಿದೆ. ಅದು ಈಗ ಇಂತಹ ಆದೇಶದೊಂದಿಗೆ ಬಂದಿದೆ. ನೀಟ್ ಎಂದು ಕರೆಯಲಾಗುವ ‘ಗಿಲ್ಲೋಟಿನ್’ (ಮನುಷ್ಯರನ್ನು ಕೊಲ್ಲುವ ಯಂತ್ರ)ನಲ್ಲಿ ವಿದ್ಯಾರ್ಥಿಗಳು ಸಾಯುವಂತೆ ಮಾಡಿರುವ ಕಾರಣಕ್ಕಾಗಿ ಬಿಜೆಪಿ ಸರ್ಕಾರವನ್ನು ತೆಗೆದು ಹಾಕಬೇಕಾಗಿದೆ ಎಂದು ಅವರು ಹೇಳಿದ್ದಾರೆ.

2023ರ ಪಿಜಿ ನೀಟ್ ಕೌನ್ಸೆಲಿಂಗ್ ಗೆ ಅರ್ಹರಾಗಲು ಬೇಕಾಗುವ ಶೇಕಡವಾರು ಅಂಕವನ್ನು ಕೇಂದ್ರ ಸರಕಾರ ಶೂನ್ಯಕ್ಕೆ ಇಳಿಸಿರುವುದು ನೀಟ್ ನ ಪಿತೂರಿಯನ್ನು ಬಹಿರಂಗಪಡಿಸಿದೆ ಎಂದು ಉದಯನಿಧಿ ಸ್ಟಾಲಿನ್ ಬುಧವಾರ ಆರೋಪಿಸಿದ್ದರು.

andolanait

Recent Posts

ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ ; ಮೂವರು ಕಾರ್ಮಿಕರು ಸಾವು.

ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಮತ್ತು ತಡೆಗೋಡೆ ದುರಸ್ತಿ ಕಾಮಗಾರಿ ನಡೆಯುತ್ತಿರುವಾಗ…

32 mins ago

ಇಂದಿನಿಂದ ಟೋಲ್‌ಗಳಲ್ಲಿ ಕ್ಯಾಷ್‌ ಇಲ್ಲ ; ಡಿಜಿಟಲ್‌ ಪಾವತಿ ಮಾತ್ರ.

ಬೆಂಗಳೂರು : ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ಧಾರದಂತೆ, ಇಂದಿನಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು…

2 hours ago

ಓದುಗರ ಪತ್ರ: ಫಲಪ್ರದವಾಗಲಿ ಮಾತುಕತೆ!

ಕೊನೆಗೂ ಘೋಷಣೆಯಾಗಿದೆ ತಾತ್ಕಾಲಿಕ ಕದನ ವಿರಾಮ ತೆರೆಬಿದ್ದಿದೆ ಕೊಲ್ಲಿ ಯುದ್ಧಕೆ ನಿಟ್ಟುಸಿರು ಬಿಟ್ಟಿದೆ ಜನಜಗ! ಸಿಟ್ಟು ಸೆಡವು ಬದಿಗಿರಿಸಿ ನಡೆಯಲಿ…

5 hours ago

ಓದುಗರ ಪತ್ರ: ಆಟೋ ಗ್ಯಾಸ್ ಅಭಾವ ಕೃತಕವೋ? ನೈಜವೋ?

ಕೊಲ್ಲಿ ಯುದ್ಧದ ನೆಪದಲ್ಲಿ ಬಂಡವಾಳಶಾಹಿಗಳು  ಕೆಜಿಗೆ ರೂ. ೮೯ ಇದ್ದ  ಆಟೋ ಗ್ಯಾಸ್ ಗ್ಯಾಸ್ ಅನ್ನು ರೂ. ೧೭೦ಕ್ಕೆ ಮಾರುತ್ತಾ…

5 hours ago

ಓದುಗರ ಪತ್ರ: ಯುದ್ಧ ಪೂರ್ಣ ನಿಲ್ಲಲಿ, ಶಾಂತಿ ನೆಲೆಸಲಿ

ಇರಾನ್ ಮೇಲೆ ಇಸ್ರೇಲ್-ಅಮೆರಿಕ ಕಳೆದ ೪೦ ದಿನಗಳಿಂದ ನಡೆಸುತ್ತಿದ್ದ ಯುದ್ಧಕ್ಕೆ   ಅಲ್ಪ ವಿರಾಮವನ್ನು ಘೋಷಿಸಲಾಗಿದೆ.  ಈ  ಯುದ್ಧದಿಂದಾಗಿ ಜಾಗತಿಕ ಆರ್ಥಿಕತೆಯ…

5 hours ago

ಓದುಗರ ಪತ್ರ: ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್  ಸೌಲಭ್ಯ ಕಲ್ಪಿಸಿ

ಮೈಸೂರು ಜಿಲ್ಲೆಯ ಸರಗೂರನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿದ್ದರೂ ಸರಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ೧೦೮ ಆಂಬ್ಯುಲೆನ್ಸ್ ಸೌಲಭ್ಯವಿಲ್ಲದೇ ತುರ್ತು ಸಂದರ್ಭದಲ್ಲಿ…

5 hours ago