ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್‌ನ ಹತ್ತನೇ ಆವೃತ್ತಿ ಸದ್ಯ ನಡೆಯುತ್ತಿದ್ದು ತಿಂಗಳು ಈ ಸೀಸನ್ ಶುರುವಾಗಿ ತಿಂಗಳು ಕಳೆದಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ನೋಡುಗರಿಗೆ ಹೆಚ್ಚಿನ ಮನರಂಜನೆ ನೀಡುತ್ತಿದ್ದು, ಈ ಅಂಶ ಕಾರ್ಯಕ್ರಮದ ಮೇಲೆ ಮಿಶ್ರ ಪ್ರತಿಕ್ರಿಯೆ ಉಂಟಾಗುವಂತೆ ಮಾಡಿದೆ.
ಇನ್ನು ಮನೆ ಒಳಗಿನ ಒಂದಷ್ಟು ಅಂಶ ಸಾಮಾಜಿಕ ಜಾಲತಾಣದಲ್ಲಿ ವಿವಾದದ ರೂಪ ಪಡೆದುಕೊಳ್ಳುತ್ತಿದ್ದು ಈ ವಿವಾದ ಇದೀಗ ಬಂಧನದವರೆಗೂ ಸಹ ತಲುಪಿದೆ. ಹೌದು, ತನಿಷ ಕುಪ್ಪಂಡ ನವೆಂಬರ್ 8ರಂದು ಪ್ರಸಾರವಾದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತಮ್ಮ ಸಹಸ್ಪರ್ಧಿ ಡ್ರೋನ್ ಪ್ರತಾಪ್ ಅವರ ಜತೆ ಮಾತನಾಡುವಾಗ “ಏನೋ ನೀನು ಒಡ್ಡನ ಥರ ಆಡ್ತೀಯ” ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಹೀಗೆ ಮಾತನಾಡುವಾಗ ವಡ್ಡ ಎಂಬ ಪದ ಬಳಕೆ ಮಾಡಿರುವುದರಿಂದ ತನಿಷಾ ಕುಪ್ಪಂಡ ವಿರುದ್ಧ ಭೋವಿ ಸಮುದಾಯದವರು ಕಿಡಿಕಾರಿದ್ದಾರೆ. ತನಿಷಾ ತಮ್ಮ ಜಾತಿನಿಂದನೆ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬೆಂಗಳೂರಿನ ಕುಂಬಳಗೋಡಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ.
ಸದ್ಯ ತನಿಷಾ ಕುಪ್ಪಂಡ ಈ ದೂರಿನ ಅಡಿಯಲ್ಲಿ ಬಂಧನಕ್ಕೊಳಗಾಗಲಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಕಳೆದ ದಿನಗಳ ಹಿಂದಷ್ಟೇ ಇದೇ ಬಿಗ್ ಬಾಸ್ ಕಾರ್ಯಕ್ರಮದ ಮತ್ತೋರ್ವ ಸ್ಪರ್ಧಿಯಾಗಿರುವ ವರ್ತೂರ್ ಸಂತೋಷ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣಕ್ಕಾಗಿ ಬಂಧಕ್ಕೊಳಗಾಗಿದ್ದರು. ಈ ಪ್ರಕರಣ ಭಾರೀ ಸದ್ದು ಮಾಡಿ ಹುಲಿ ಉಗರು ಧರಿಸಿದ್ದ ಸೆಲೆಬ್ರಿಟಿಗಳ ಬಂಧನ ಯಾವಾಗ ಎಂದು ನೆಟ್ಟಿಗರು ಪ್ರಶ್ನೆಯನ್ನು ಮಾಡಿದ್ದರು. ಇದರ ತರುವಾಯ ಅರಣ್ಯ ಇಲಾಖೆ ಪೊಲೀಸರು ಆಯಾ ಸೆಲೆಬ್ರಿಟಿಗಳ ಮನೆಗೆ ಭೇಟಿ ನೀಡಿ ಹುಲಿ ಉಗುರಿಗಾಗಿ ಶೋಧ ನಡೆಸಿದ್ದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…