BREAKING NEWS

120ನೇ ವಯಸ್ಸಿಗೆ ಕಾಲಿಟ್ಟ ವಿಶ್ವದ ಅತ್ಯಂತ ದೊಡ್ಡ ಮೊಸಳೆ ಕ್ಯಾಸಿಯಸ್​

ಐಲ್ಯಾಂಡ್ : ಕ್ಯಾಸಿಯಸ್ ಎಂಬ ಹೆಸರಿನ ಈ ದೈತ್ಯ ಮೊಸಳೆ ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನ ಗ್ರೀನ್​ ಐಲ್ಯಾಂಡ್​ನಲ್ಲಿರುವ ಮರೀನ್​ಲ್ಯಾಂಡ್ ಕ್ರೊಕೊಡೈಲ್​ ಪಾರ್ಕ್​ನಲ್ಲಿ ವಾಸವಾಗಿದೆ 18 ಅಡಿ ಉದ್ದದ ಈ ದೈತ್ಯ ಎರಡು ದಿನಗಳ ಹಿಂದೆ 120ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಇದಕ್ಕೆ ಚಿಕನ್​ ಮತ್ತು ಟ್ಯೂನಾ ಫಿಷ್​ ಖಾದ್ಯಗಳನ್ನು ಕೊಟ್ಟು ಖುಷಿಪಡಿಸಲಾಗಿದೆ. ಈ ಮೊಸಳೆಯು 1987ರಿಂದಲೂ ಇದೇ ಉದ್ಯಾನವದಲ್ಲಿ ವಾಸಿಸುತ್ತಿದ್ದು ಗಿನ್ನೀಸ್​ ವರ್ಲ್ಡ್​ ರಿಕಾರ್ಡ್​ನಲ್ಲಿಯೂ ಇದರ ಹೆಸರು ದಾಖಲಾಗಿದೆ.

ಕ್ಯಾಸಿಯಸ್​ ವಯಸ್ಸಿನ ಹಂಗಿಲ್ಲದೇ ಚೈತನ್ಯಶೀಲವಾಗಿದೆ. ಉದ್ಯಾನದಲ್ಲಿ ಅತ್ಯುತ್ಸಾಹದಿಂದ ಇತರೇ ಮೊಸಳೆಗಳೊಂದಿಗೆ ಬೆರೆಯುತ್ತದೆ ಮತ್ತು ಎಲ್ಲರಿಗಿಂತ ಆಕರ್ಷಕವಾಗಿ ಕಾಣುತ್ತದೆ. ‘ಸಾಮಾನ್ಯವಾಗಿ ವಯಸ್ಸಾದಂತೆ ಮೊಸಳೆಗಳು ವಿಧೇಯ ಮತ್ತು ನಿರಾಸಕ್ತಿಯಿಂದ ವರ್ತಿಸುತ್ತವೆ. ಆದರೆ ಕ್ಯಾಸಿಯಸ್​ ಈಗಲೂ ಉತ್ಸುಕನಾಗಿರುತ್ತದೆ. ಯಾರಾದರೂ ಅದರೆಡೆ ಲಕ್ಷ್ಯಕೊಟ್ಟರೆ ಉತ್ಸಾಹದಿಂದ ಹತ್ತಿರ ಬರಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ಅವನ ಹೊಳೆಯುವ ಕಣ್ಣುಗಳನ್ನು ನೋಡುವುದೇ ಚಂದ’ ಎಂದು 1987ರಲ್ಲಿ ಈ ದೈತ್ಯನನ್ನು ಗ್ರೀನ್ ಲ್ಯಾಂಡ್​ಗೆ ಕರೆತಂದ ಸಂಶೋಧಕ ಟೂಡಿ ಸ್ಕಾಟ್​ ಹೇಳಿದ್ದಾರೆ.

1984ರಲ್ಲಿ ಆಸ್ಟ್ರೇಲಿಯಾದ ಉತ್ತರ ಭಾಗದ ಫಿನ್ನೀಸ್​ ನದಿಯಲ್ಲಿ ಕ್ಯಾಸಿಯಸ್​ ಅನ್ನು ಬಂಧಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೊಸಳೇ ಸಂಶೋಧಕ ಗ್ರೇಮ್ ವೆಬ್​, ‘ಈ ಮೊಸಳೆಯನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಈಗಲೂ ಆ ದೃಶ್ಯಗಳು ಕಣ್ಣಮುಂದಿವೆ. ಆಗ ಬರೋಬರೀ 16 ಅಡಿ, 10 ಇಂಚುಗಳಷ್ಟು ಉದ್ದವಿತ್ತು’ ಎಂದು ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

lokesh

Recent Posts

ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…

12 hours ago

ನಮ್ಮದು ಸೌಜನ್ಯದ ಭೇಟಿಯಷ್ಟೇ: ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು:  ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…

12 hours ago

ಸ್ಟೇ ತಗೋಬಾರದಿತ್ತು, ಫೈಟ್ ಮಾಡಬೇಕಿತ್ತು – ಮೈಸೂರಿನಲ್ಲಿ ಸಿದ್ದು ಭೇಟಿಯಾದ ರಮೇಶ್‌ ಜಾರಕಿಹೊಳಿ

ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…

12 hours ago

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…

13 hours ago

ರೇಣುಕಾಸ್ವಾಮಿಗೆ ಕುಟುಕು ಜೀವ; ದರ್ಶನ್ ರೋಷ ಭಾವ

ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್‌ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು  " ನಾನು…

13 hours ago

ರೇಣುಕಾಸ್ವಾಮಿ ಎದೆಯ ಮೇಲೆ ನಿಂತು ಅದುಮುತ್ತಿದ್ದ ದರ್ಶನ್

ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…

13 hours ago