ಐಲ್ಯಾಂಡ್ : ಕ್ಯಾಸಿಯಸ್ ಎಂಬ ಹೆಸರಿನ ಈ ದೈತ್ಯ ಮೊಸಳೆ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಗ್ರೀನ್ ಐಲ್ಯಾಂಡ್ನಲ್ಲಿರುವ ಮರೀನ್ಲ್ಯಾಂಡ್ ಕ್ರೊಕೊಡೈಲ್ ಪಾರ್ಕ್ನಲ್ಲಿ ವಾಸವಾಗಿದೆ 18 ಅಡಿ ಉದ್ದದ ಈ ದೈತ್ಯ ಎರಡು ದಿನಗಳ ಹಿಂದೆ 120ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಈ ಸಂದರ್ಭದಲ್ಲಿ ಇದಕ್ಕೆ ಚಿಕನ್ ಮತ್ತು ಟ್ಯೂನಾ ಫಿಷ್ ಖಾದ್ಯಗಳನ್ನು ಕೊಟ್ಟು ಖುಷಿಪಡಿಸಲಾಗಿದೆ. ಈ ಮೊಸಳೆಯು 1987ರಿಂದಲೂ ಇದೇ ಉದ್ಯಾನವದಲ್ಲಿ ವಾಸಿಸುತ್ತಿದ್ದು ಗಿನ್ನೀಸ್ ವರ್ಲ್ಡ್ ರಿಕಾರ್ಡ್ನಲ್ಲಿಯೂ ಇದರ ಹೆಸರು ದಾಖಲಾಗಿದೆ.
ಕ್ಯಾಸಿಯಸ್ ವಯಸ್ಸಿನ ಹಂಗಿಲ್ಲದೇ ಚೈತನ್ಯಶೀಲವಾಗಿದೆ. ಉದ್ಯಾನದಲ್ಲಿ ಅತ್ಯುತ್ಸಾಹದಿಂದ ಇತರೇ ಮೊಸಳೆಗಳೊಂದಿಗೆ ಬೆರೆಯುತ್ತದೆ ಮತ್ತು ಎಲ್ಲರಿಗಿಂತ ಆಕರ್ಷಕವಾಗಿ ಕಾಣುತ್ತದೆ. ‘ಸಾಮಾನ್ಯವಾಗಿ ವಯಸ್ಸಾದಂತೆ ಮೊಸಳೆಗಳು ವಿಧೇಯ ಮತ್ತು ನಿರಾಸಕ್ತಿಯಿಂದ ವರ್ತಿಸುತ್ತವೆ. ಆದರೆ ಕ್ಯಾಸಿಯಸ್ ಈಗಲೂ ಉತ್ಸುಕನಾಗಿರುತ್ತದೆ. ಯಾರಾದರೂ ಅದರೆಡೆ ಲಕ್ಷ್ಯಕೊಟ್ಟರೆ ಉತ್ಸಾಹದಿಂದ ಹತ್ತಿರ ಬರಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ಅವನ ಹೊಳೆಯುವ ಕಣ್ಣುಗಳನ್ನು ನೋಡುವುದೇ ಚಂದ’ ಎಂದು 1987ರಲ್ಲಿ ಈ ದೈತ್ಯನನ್ನು ಗ್ರೀನ್ ಲ್ಯಾಂಡ್ಗೆ ಕರೆತಂದ ಸಂಶೋಧಕ ಟೂಡಿ ಸ್ಕಾಟ್ ಹೇಳಿದ್ದಾರೆ.
1984ರಲ್ಲಿ ಆಸ್ಟ್ರೇಲಿಯಾದ ಉತ್ತರ ಭಾಗದ ಫಿನ್ನೀಸ್ ನದಿಯಲ್ಲಿ ಕ್ಯಾಸಿಯಸ್ ಅನ್ನು ಬಂಧಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೊಸಳೇ ಸಂಶೋಧಕ ಗ್ರೇಮ್ ವೆಬ್, ‘ಈ ಮೊಸಳೆಯನ್ನು ಹಿಡಿಯುವುದು ಸುಲಭವಾಗಿರಲಿಲ್ಲ. ಈಗಲೂ ಆ ದೃಶ್ಯಗಳು ಕಣ್ಣಮುಂದಿವೆ. ಆಗ ಬರೋಬರೀ 16 ಅಡಿ, 10 ಇಂಚುಗಳಷ್ಟು ಉದ್ದವಿತ್ತು’ ಎಂದು ಆ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…
ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…
ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…
ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…
ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…