ಚುನಾವಣೆಗಳಲ್ಲಿ ಹಣ ಹಂಚಿಕೆ ಕಾಂಗ್ರೆಸ್ ಸಂಪ್ರದಾಯ : ಸಿಎಂ

ಹುಬ್ಬಳ್ಳಿ: ಚುನಾವಣೆಗಳಲ್ಲಿ ಹಣ ಹಂಚಿಕೆ ಕಾಂಗ್ರೆಸ್‌ನ ಸಂಪ್ರದಾಯವೇ ಹೊರತು ಬಿಜೆಪಿಯದಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಉಪಚುನಾವಣೆಯಲ್ಲಿ ಬಿಜೆಪಿ ಹಣ ಬಲ ಬಳಕೆ ಮಾಡುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಹಂಚಿಕೆ ಮಾಡುವ ಸಂಪ್ರದಾಯವನ್ನು ಕಾಂಗ್ರೆಸ್ ಹಿಂದಿನಿಂದಲೂ ಮುಂದುವರಿಸಿಕೊಂಡು ಬಂದಿದ್ದು ನಂಜನಗೂಡು, ಗುಂಡ್ಲುಪೇಟೆ, ಕುಂದಗೋಳ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ತಾನು ಮಾಡಿದ ಮಹತ್ ಕಾರ್ಯವನ್ನು ಕಾಂಗ್ರೆಸ್ ಮರೆತಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ, ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೀಶ ಪಾಟೀಲ, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೋವಿಡ್ ೧೯ ನಿರ್ವಹಣೆಯಲ್ಲಿ ಖಾಸಗಿ ಕ್ಷೇತ್ರಕ್ಕಿಂತಲೂ ಸರ್ಕಾರಿ ಆಸ್ಪತ್ರೆಗಳ ಸೇವೆಯೇ ಬಹುದೊಡ್ಡದು. ಮೊದಲು ವೈದ್ಯಕೀಯ ಕಿಟ್ ಸೇರಿದಂತೆ ಸೂಕ್ತ ಸಲಕರಣೆಗಳು ದೇಶದಲ್ಲಿ ಲಭ್ಯವಿರಲಿಲ್ಲ. ಈಗ ನಾವೇ ಎಲ್ಲವನ್ನೂ ರಫ್ತು ಮಾಡುವಷ್ಟು ಮುಂದುವರಿದಿದ್ದೇವೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

× Chat with us