ಕಾರ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದು ಕದಕಲ್‌ ನಲ್ಲಿ ರಸ್ತೆ ಅಪಘಾತ

ಕೊಡಗು: ಟಿಪ್ಪರ್‌ ಲಾರಿ ಕಾರಿಗೆ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದು ಕೆದಕಲ್ ರಸ್ತೆ ಬಳಿ ರಸ್ತೆ ಅಪಘಾತ ಸಂಭವಿಸಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮದ ಕೆದಕಲ್ ಬಳಿ ಘಟನೆ. ಕುಶಾಲನಗರದಿಂದ ಮಡಿಕೇರಿ ಕಡೆ ತೆರಳುತ್ತಿದ್ದ ಕಲ್ಲು ತುಂಬಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದು ರಸ್ತೆ ಅಪಘಾತ‌ ನಡೆದಿದೆ.

ಚಾಲಕ ಸೇರಿ ಇಬ್ಬರಿಗೆ ಸಣ್ಣ ಪುಟ್ಟ ಗಾಯ. ಲಾರಿ ಮಗುಚಿದ ಹಿನ್ನೆಲೆ ರಸ್ತೆಯ ತುಂಬೆಲ್ಲಾ ಬಿಂದಿರೋ ಕಲ್ಲುಗಳು. ಈ ಘಟನೆಯಿಂದಾಗಿ ಮೈಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ. ಸುಂಟಿಕೊಪ್ಪ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಪ್ರಕರಣವು ದಾಖಲಾಗಿದೆ.

× Chat with us