ಅಫ್ಘಾನಿಸ್ತಾನ: ರಕ್ಷಣಾ ಸಚಿವರ ನಿವಾಸದ ಬಳಿಯೇ ಕಾರು ಬಾಂಬ್‌ ಸ್ಫೋಟ!

ಕಾಬುಲ್: ಅಫ್ಘಾನಿಸ್ತಾನದ ರಕ್ಷಣಾ ಸಚಿವರ ನಿವಾಸಕ್ಕೆ ಸ್ವಲ್ಪ ದೂರದಲ್ಲೇ ಕಾರು ಬಾಂಬ್‌ ಸ್ಫೋಟಿಸಿರುವ ಘಟನೆ ರಾಜಧಾನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಕಾರು ಸ್ಫೋಟದ ಜೊತೆಗೆ ಗುಂಡಿನ ಸದ್ದು ಕೂಡ ಕೇಳಿಬಂದಿದೆ. ತಕ್ಷಣ ಅಲ್ಲಿ ನಿಯೋಜನೆಗೊಂಡಿದ್ದ ಕಾವಲು ಪಡೆ ಅಲರ್ಟ್‌ ಆಗಿ ಪ್ರದೇಶವನ್ನು ಸುತ್ತುವರಿದಿದೆ.

ಸ್ಫೋಟಗೊಂಡ ವಲಯದಲ್ಲಿ ಸರ್ಕಾರದ ಹಲವಾರು ಕಟ್ಟಡಗಳಿವೆ. ಅಲ್ಲದೇ, ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿಗಳು ಹಾಗೂ ಮಾನವಿಕ ಸಂಸ್ಥೆಗಳು ಸಹ ಈ ಪ್ರದೇಶದಲ್ಲಿವೆ.

ಸ್ಫೋಟದ ಜವಾಬ್ದಾರಿಯನ್ನು ಈವರೆಗೂ ಯಾವುದೇ ಉಗ್ರ ಸಂಘಟನೆ ಒಪ್ಪಿಕೊಂಡಿಲ್ಲ.

ʻರಕ್ಷಣಾ ಸಚಿವ ಬಿಸ್ಮಿಲ್ಲಾ ಮೊಹಮ್ಮದಿ ಅವರ ಅತಿಥಿಗೃಹಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಆದರೆ, ದಾಳಿಯಲ್ಲಿ ಯಾರಿಗೂ ತೊಂದರೆಯಾಗಿಲ್ಲʼ ಎಂದು ಟೊಲೊ ನ್ಯೂಸ್‌ ತಿಳಿಸಿದೆ.

× Chat with us