ನಾಗರಹೊಳೆ ಸಫಾರಿ ಕ್ಯಾಮೆರಾ ಶುಲ್ಕ ಹೆಚ್ಚಳ

ಮೈಸೂರು: ಸಫಾರಿ ವೇಳೆ ಛಾಯಾಗ್ರಹಣಕ್ಕೆ ಕ್ಯಾಮೆರಾ ಬಳಸುವವರಿಗೆ ಬಿಗ್‌ ಶಾಕ್‌ ನೀಡಲಾಗಿದೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ವೇಳೆ ಕ್ಯಾಮೆರಾ ಬಳಸಲು ವಿಧಿಸುತ್ತಿದ್ದ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಈ ಹಿಂದೆ ಡಿಎಸ್‌ಎಲ್‌ಆರ್, ೫೦೦ ಎಂಎಂ ಕ್ಯಾಮೆರಾಕ್ಕೆ 500 ರೂ. ಇದ್ದಿದ್ದನ್ನು 1500ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಪಾರ್ಕಿಂಗ್ ಶುಲ್ಕ ಹಾಗೂ ಸಫಾರಿ ದರವನ್ನೂ ಏರಿಕೆ ಮಾಡಲಾಗಿದೆ. ವೀರನಹೊಸಳ್ಳಿ ಹಾಗೂ ನಾಚನಹಳ್ಳಿ ಪಾಳ್ಯ ವ್ಯಾಪ್ತಿಯಲ್ಲಿ ಸಫಾರಿ ಮಾಡುವವರಿಗೂ ಇದು ಅನ್ವಯವಾಗಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

× Chat with us