video… ದುಬೈನಲ್ಲಿರುವ ಗಗನಚುಂಬಿ ಕಟ್ಟಡ ಬುರ್ಜ್‌ ಖಲೀಫಾದಲ್ಲಿ ಗಾಂಧಿ ಜೀವನ ಸಂದೇಶ

(ಚಿತ್ರ ಕೃಪೆ: ಎನ್‌ಡಿಟಿವಿ)

ದುಬೈ: ಮಹಾತ್ಮ ಗಾಂಧೀಜಿ ಅವರ 152ನೇ ಜನ್ಮದಿನದ ಅಂಗವಾಗಿ ಶನಿವಾರ (ಅ.2)ರಂದು ದುಬೈನಲ್ಲಿರೋ ಗಗನಚುಂಬಿ ಕಟ್ಟಡ ಬುರ್ಜ್‌ ಖಲೀಫಾದಲ್ಲಿ ಎನ್‌ಇಡಿ ವಿಡಿಯೊ ಪ್ರೊಜೆಕ್ಷನ್‌ ಮೂಲಕ ಗಾಂಧೀಜಿ ಜೀವನ ಸಂದೇಶವನ್ನು ಪ್ರದರ್ಶಿಸಲಾಯಿತು.

ಗಾಂಧೀಜಿ ಜನ್ಮದಿನವನ್ನು ವಿಶ್ವದಾದ್ಯಂತ ʻಅಂತಾರಾಷ್ಟ್ರೀಯ ಅಹಿಂಸಾ ದಿನʼವನ್ನಾಗಿ ಆಚರಿಸಲಾಗುತ್ತಿದೆ.

ವಿದೇಶಗಳಲ್ಲಿರುವ ಭಾರತದ ಪ್ರಚಾರಕರು ಇಂತಹ ವಿಡಿಯೊಗಳನ್ನು ಪ್ರದರ್ಶಿಸುವ ಮೂಲಕ ಗಾಂಧೀಜಿ ಅವರ ಅಹಿಂಸಾ ಸಂದೇಶ ಹಾಗೂ ಸಹಿಷ್ಣುತೆಯನ್ನು ಯುವಜನಾಂಗಕ್ಕೆ ತಿಳಿಸಿಕೊಡುವ ಕಾರ್ಯ ಮಾಡಿದ್ದಾರೆ.

ದುಬೈ ಪ್ರವಾಸ ಕೈಗೊಂಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಿದರು.

ʻಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಭಾರತದ ರಾಷ್ಟ್ರಪಿತ. ಭಾರತೀಯರ ಮಾದರಿ. ಗಾಂಧೀಜಿ ಅವರ ತಾತ್ವಿಕ, ಆಧ್ಯಾತ್ಮಿಕ ವಿಚಾರಗಳನ್ನು ಭಾರತೀಯರು ಹಾಗೂ ವಿಶ್ವದ ಜನತೆ ಅಳವಡಿಸಿಕೊಳ್ಳಬೇಕುʼ ಎಂದು ಹೇಳಿದ್ದಾರೆ.

× Chat with us