ಮಾರ್ಚ್ ಮೊದಲ ವಾರ ಬಜೆಟ್ ಅಧಿವೇಶನ: ಸಿಎಂ ಬಿಎಸ್‌ವೈ ಸ್ಪಷ್ಟನೆ

ಮೈಸೂರು: ಸದ್ಯದ ಆರ್ಥಿಕ ಪರಿಸ್ಥಿತಿ ನಡುವೆಯೂ ರೈತರನ್ನು ಆಲೋಚನೆಯಲ್ಲಿ ಇಟ್ಟುಕೊಂಡು ಮಾರ್ಚ್ ಮೊದಲ ವಾರ ಬಜೆಟ್ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಸುತ್ತೂರಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಜ.13ರಂದು ಮಧ್ಯಾಹ್ನ ಆಗಲಿದೆ‌. ವಿಸ್ತರಣೆ ಅಥವಾ ಪುನಾರಚನೆಯೊ ಕಾದು ನೋಡಿ ಎಂದರು.

ಸಚಿಚ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

× Chat with us