ಹಾಸನ: 22 ವರ್ಷ ಸೇವೆ ಸಲ್ಲಿಸಿ ತವರಿಗೆ ಮರಳಿದ ಯೋಧನಿಗೆ ಗ್ರಾಮಸ್ಥರಿಂದ ಭವ್ಯ ಸ್ವಾಗತ!

ಹಾಸನ: ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಹಿಂತಿರುಗಿದ ವೀರ ಯೋಧನಿಗೆ ಗ್ರಾಮದ ಜನತೆ ಭವ್ಯ ಸ್ವಾಗತ ಕೋರಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮಕ್ಕೆ ಶನಿವಾರ ಯೋಧ ಎಚ್.ಎಲ್ ಹಿರಣ್ಣಯ್ಯ ಆಗಮಿಸಿದರು. ವೀರ ಯೋಧನ ಪರ ಘೋಷಣೆ ಕೂಗಿ, ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದರು.

ಎಚ್‌.ಎಲ್‌.ಹಿರಣ್ಣಯ್ಯ ಬಿಎಸ್‌ಎಫ್‌ನಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ನ್ನಿನ್ನೆ ತವರಿಗೆ ಹಿಂದಿರುಗಿದರು. ಗ್ರಾಮದ ಜನರು, ಸ್ನೇಹಿತರೆಲ್ಲಾ ಸೇರಿ ಭವ್ಯ ಸ್ವಾಗತ ಕೋರಿ ವೀರ ಸೇನಾನಿಯ ಸೇವೆಯನ್ನು ಕೊಂಡಾಡಿದರು. ಯೋಧನ ಕುಟುಂಬಸ್ಥರಲ್ಲೂ ಸಂಭ್ರಮ ಮನೆ ಮಾಡಿತ್ತು.

ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಸಕಲೇಶಪುರದಲ್ಲಿ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದ ಹಿರಣ್ಣಯ್ಯ ಅವರು 2000ನೇ ಇಸವಿಯಲ್ಲಿ ಬಿಎಸ್ಎಫ್ ಗಡಿ ‌ಭದ್ರತಾ ಪಡೆಗೆ ಸೇರಿದ್ದರು. ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ್, ಪಂಜಾಬ್‌, ಗುಜರಾತ್‌, ರಾಜಸ್ತಾನ್‌, ದೆಹಲಿ, ಮಣಿಪುರಗಳಲ್ಲಿ ಸೇವೆ ಸಲ್ಲಿಸಿ ಈಗ ಹುಟ್ಟೂರಿಗೆ ಮರಳಿದ್ದಾರೆ.

× Chat with us