ಬೆಂಗಳೂರು: ಮಾಜಿ ಮಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮೇಲೆ ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಬಾಲಕೀಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಅಡಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದರುವ ಮಾಜಿ ಸಿಎಂ ಬಿಎಸ್‌ವೈ ಯಾರೋ ಒಬ್ಬ ಹೆಣ್ಣು ಮಗಳು ದೂರು ಕೊಟ್ಟಿದ್ದಾಳೆ, ಇರಲಿ ಎದುರಿಸೋಣ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದರು ಅವರು, ಸುಮಾರು ಒಂದೂವರೆ ತಿಂಗಳ ಹಿಂದಿನಿಂದಲೂ ತಾಯಿ-ಮಗಳು ನಮ್ಮ ಮನೆ ಕಡೆ ನನ್ನನ್ನು ಕಾಣಲು ಬಂದಿದ್ದರು, ನಾನು ಹಲವಾರು ಬಾರಿ ನಿರಾಕರಿಸಿದ್ದೆ. ಒಂದು ದಿನ ಅಳುತ್ತಾ ಮನೆ ಮುಂದೆ ನಿಂತಿದ್ದಾಗ ಕರೆದು ಒಳಗೆ ಕೂರಿಸಿ ಅವರ ಸಮಸ್ಯೆಗಳ ಬಗ್ಗೆ ಆಲಿಸಿದೆ. ಅವರು ನನ್ನ ಬಳಿ ಅವರ ಸಮಸ್ಯೆಗಳನ್ನು ಹೇಳಿಕೊಂಡರು. ನಂತರ ನಾನು ಅವರಿಗೆ ಕಮಿಷನರ್ ಭೇಟಿಯಾಗುವಂತೆ ಸೂಚಿಸಿದ್ದೆ ಎಂದರು.
ತುಂಬಾ ಕಷ್ಟದಲ್ಲಿರುವುದಾಗಿ ಹೇಳಿಕೊಂಡಿದ್ದರಿಂದ ಅವರಿಗೆ ಒಂದಷ್ಟು ಹಣದ ಸಹಾಯವನ್ನು ಮಾಡಿ ತಾಯಿ-ಮಗಳನ್ನು ಕಳಿಸಿಕೊಟ್ಟೆ. ಆದರೆ, ಈಗ ನೋಡಿದರೆ ಆಕೆ ನನ್ನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಇರಲಿ ಇದನ್ನು ಎದುರಿಸೋಣ ಮತ್ತು ಈ ಬಗ್ಗೆ ಈ ಹೆಚ್ಚು ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಉನ್ನಾವೋ: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ಮಾಡಿದ ಪರಿಣಾಮ 65 ವರ್ಷದ ಅಂಪೈರ್ ಸಾವನ್ನಪ್ಪಿದ್ದು, ಹಲವಾರು ಆಟಗಾರರು…
ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23.8 ಕೋಟಿ ರೂ ಮೌಲ್ಯದ ಕೊಕೇನ್ ಸೀಜ್ ಮಾಡಲಾಗಿದೆ. ಎನ್‌ಸಿಬಿ ಅಧಿಕಾರಿಗಳು…
ಬೆಂಗಳೂರು: ಕೆಜಿಎಫ್-2 ಯಶಸ್ಸಿನ ನಂತರ ಇಡೀ ದೇಶದ ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ…
ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದ್ದಾರೆ.…
ರಾಯಚೂರು: ರಾಯಚೂರು ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…
ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಬಂದ್ ಆಗಿದ್ದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.…