BREAKING NEWS

ಬ್ರಾಂಡ್ ಮೈಸೂರು ಲೋಗೋ ಅನಾವರಣ

ಮೈಸೂರು: ಪ್ರವಾಸೋಧ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರವಾಸೋಧ್ಯಮ ಇಲಾಖೆಯ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ನೂತನವಾದ ಬ್ರಾಂಡ್ ಮೈಸೂರು ಲೋಗೋವನ್ನು ಭಾನುವಾರ ಜಿಲ್ಲಾಪಂಚಾಯಿತಿಯ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.

ಲೋಗೋ ಬಿಡುಗಡೆ ಮಾತನಾಡಿದ ಸಚಿವ ಹೆಚ್‌.ಕೆ.ಪಾಟೀಲ್‌ ,  ಮೈಸೂರು ಬ್ರಾಂಡಿಂಗ್ ಗಾಗಿ ಇದು ದೊಡ್ಡ ಹೆಜ್ಜೆ. ಇದರಿಂದ ಹಲವಾರು ಅನುಕೂಲತೆಗಳು ಆಗಲಿದೆ. ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯಗಳನ್ನು ಆರ್ಕಸಿಸುವುದಕ್ಕಾಗಿ ಮಾಡುತ್ತಿಲ್ಲ. ವಿಶ್ವದ ಪ್ರವಾಸಿ ಪ್ರೇಮಿಗಳನ್ನು ಸೆಳೆಯಲು ಮುಖ್ಯ ಉದ್ದೇಶವಾಗಿದೆ. ಇತಿಹಾಸ ತಿಳಿಯಲು ಅನುಕೂಲವಾಗುತ್ತದೆ.

ಮೈಸೂರನ್ನು ಕೇವಲ ಅರಮನೆಗಳ ನಗರಿ ಎಂದೇ ನೋಡುತ್ತೇವೆ. ಆದರೆ ಇಲ್ಲಿ ಪ್ರವಾಸಿ ಕ್ಷೇತ್ರಗಳನ್ನು ಇಲ್ಲಿ ನೋಡಬಹುದು. ಜಗತ್ತಿನಲ್ಲಿ ಹಲವಾರು ಪ್ರವಾಸಿ ಕ್ಷೇತ್ರಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡುತ್ತದೆ. ಹಳೆಬೇಡು ಬೇಲೂರಿನ 72 ಸುಂದರಮೂರ್ತಿಗಳನ್ನು ಬ್ರಿಟಿಷರು ತಮ್ಮ ದೇಶದ ಮ್ಯೂಸಿಯಂನಲ್ಲಿ ಇಟ್ಟುಕೊಂಡಿದ್ದಾರೆ. ಇದನ್ನು ಮತ್ತೆ ರಾಜ್ಯಕ್ಕೆ ತರುವ ಬಗ್ಗೆ ಪ್ರಮಾಣಿಕವಾಗಿ ಸರ್ಕಾರ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ಮೈಸೂರಿನ ಹಳೆಯ ಪಾರಂಪರಿಕ ಅಥವಾ ಹಳೆಯ ಕಟ್ಟಡಗಳನ್ನು ಸರ್ಕಾರ ಒಂದೇ ರಕ್ಷಿಸಲು ಸಾಧ್ಯವಿಲ್ಲ. ಅದರ ರಕ್ಷಣೆಗೆ ಜನರ ಸಹಕಾರ, ಸಹಾಯ ಅವಶ್ಯಕತೆ ಇದೆ. 25 ಸಾವಿರಕ್ಕೂ ಹೆಚ್ಚು ಸ್ಮಾರಕ ಇದೆ‌. ಇದರಲ್ಲಿ ಎಲ್ಲವೂ ರಕ್ಷಿಸಲಾಗುತ್ತಿಲ್ಲ. 500 ಸ್ಮಾರಕ ಗುರುತಿಸಿ ರಕ್ಷಿಸುವುದರ ಜೊತೆಗೆ ದತ್ತು ಕೊಡುವ ಪ್ರಕ್ರಿಯೇಯನ್ನು ಶೀಘ್ರದಲ್ಲೇ ತರುತ್ತೇವೆ ಎಂದರು.

ವಿದೇಶಗಲ್ಲಿರುವ ಭಾರತೀಯರಿಗೆ ತಮ್ಮ ಊರಿನ, ಗ್ರಾಮದ ಸ್ಮಾರಕಗಳ ಅಭಿಮಾನದ ಆಸಕ್ತಿ ಇದೆ.‌ ಇದರಿಂದ ಅವರು ತಮ್ಮ ಗ್ರಾಮದ ಅಭಿಮಾನವಿದೆ. ಅಂತಹವರು ತಮ್ಮ ಊರಿನ ಸ್ಮಾರಕಗಳನ್ನು ದತ್ತು ತೆಗೆದುಕೊಳ್ಳಲು ಆಸಕ್ತರಾಗಿದ್ದಾರೆ. ಹೀಗಾಗಿ ಸ್ಮಾರಕಗಳನ್ನು ಮುಂದಿನ ದಿನಗಳಲ್ಲಿ ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.

ಬೆಳಗಾವಿ, ಹುಬ್ಬಳಿ , ಬಳ್ಳಾರಿಯಿಂದ ಮೈಸೂರಿಗೆ ಬರುವ ಜನರು ಅರ್ಧ ಪ್ರವಾಸಿ ತಾಣಗಳನ್ನು ನೋಡಿಕೊಂಡು ಬರುತ್ತಾರೆ. ಪ್ರವಾಸಿತಾಣಗಳು ಧಾರ್ಮಿಕವಾಗಿಯೂ ನೋಡುತ್ತಾರೆ. ಸೋಮನಾಥಪುರ ಹಳೆಬಿಡಿನ ಕ್ಷೇತ್ರಗಳಂತೂ ಎಲ್ಲರ ಆಕರ್ಷಣೆಗೆ ಒಳಗಾಗುತ್ತದೆ. ಕಾರಣ ಅಲ್ಲಿನ ಕಲೆ ಮತ್ತು ವಾಸ್ತು ಶಿಲ್ಪ. ಇಂತಹ ಪ್ರವಾಸಿ ಕ್ಷೇತ್ರಗಳನ್ನು ರಕ್ಷಿಸಬೇಕು. ಪ್ರವಾಸಿಗರಿಗೆ ತಿಳಿಸುವಂತಹ ಕೆಲಸ ಆಗಬೇಕು ಎಂದರು.

ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಇದೊಂದು ಒಳ್ಳೆಯ ಅವಕಾಶ. ಪ್ರವಾಸಿಕ್ಷೇತ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇವೆ. ಸ್ಮಾರಕಗಳನ್ನು ರಕ್ಷಿಸಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಶಾಸಕರು ಹಾಗೂ ಅಧಿಕಾರಿಗಳು ಗಮನಹರಿಸಬೇಕು.

ಕಾರ್ಯಕ್ರಮಕ್ಕೂ ಮುಂಚೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಜಿಲ್ಲೆಯಲ್ಲಿ ಕೇವಲ ಅರಮನೆ, ಜೂ ಮಾತ್ರವಲ್ಲದೇ 24ಕ್ಕೂ ಹೆಚ್ಚು ಪ್ರವಾಸೋಧ್ಯಮ ಕ್ಷೇತ್ರಗಳಿವೆ ಇವುಗಳನ್ನು ಜಗತ್ತಿಗೆ ತೋರಿಸಬೇಕು. ಮೈಸೂರು ಪ್ರವಾಸಿಗರಿಗೆ ಸುರಕ್ಷಿತವಾಗಿದೆ ಎಂದು ತಿಳಿಸಬೇಕು. ದಸರಾ ಹಾಗೂ ಅರಮನೆ ಮಾತ್ರ ಪ್ರವಾಸೋಧ್ಯಮದ ಕೇಂದ್ರಬಿಂದುವಲ್ಲ. ತಲಕಾಡಿನ ಸೋಮನಾಥಪುರ ಸೇರಿದಂತೆ ಹಲವಾರು ತಾಣಗಳಿವೆ. ಅವುಗಳನ್ನು ಪ್ರವಾಸಿಗರಿಗೆ ತಲುಪುವಂತೆ ಮಾಡಬೇಕು ಎಂದರು.

ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಮೂಲಭೂತ ಸೌಕರ್ಯಕೊಡಲು ಜಿಲ್ಲಾಡಳಿತ ಸಿದ್ದವಾಗಿದೆ. ಇದರ ಬಗ್ಗೆ ಜಿಲ್ಲಾಡಳಿತ ಮುಂದೆ ಇದೆ. ಸರ್ಕಾರದ ಬಳಿಯೂ ಇದರ ಬಗ್ಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದ್ದೆವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ರವಿಶಂಕರ್, ದರ್ಶನ್ ದೃವನಾರಾಯಣ್, ಮಂಜೇಗೌಡ, ಜಿಲ್ಲಾಪಂಚಾತಿಯಿತ, ಪ್ರವಾಸೋದ್ಯ ಇಲಾಖೆಯಜಂಟಿ ನಿರ್ದೇಶಕರಾದ ಎಂ.ಕೆ ಸವಿತಾ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಗಾಯಿತ್ರಿ, ಪುರಾತತ್ವ ಇಲಾಖೆಯ ಆಯುಕ್ತ ದೇವರಾಜು, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಸೇರಿದಂತೆ ಇತರರು ಹಾಜರಿದ್ದರು.

andolanait

Recent Posts

ಮೈಸೂರು ಫಾಲ್ಕನ್ ಟೈರ್ಸ್‌ನ ಮಾಜಿ ಮಾಲೀಕ ರುಹಿಯಾ ಬಂಧನ

315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ ಕೋಲ್ಕತ್ತಾ : ಶೆಲ್‌ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ…

44 mins ago

ಹೊರ್ಮುಜ್ ಕುರಿತು ಬ್ರಿಟನ್ ನೇತೃತ್ವದ ಸಭೆಯಲ್ಲಿ ಭಾರತ ಭಾಗವಹಿಸಲಿದೆ

ಲಂಡನ್‌ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28ರಿಂದ ಮುಚ್ಚಲ್ಪಟ್ಟಿರುವ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಚರ್ಚಿಸಲು ಬ್ರಿಟನ್…

50 mins ago

ಸಂವಿಧಾನ ಬದಲಾವಣೆ ಅಸಾಧ್ಯ : ಮುಖ್ಯಮಂತ್ರಿ ಚಂದ್ರು

ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…

2 hours ago

KSOU | ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…

2 hours ago

ನಕ್ಸಲ್ ಮುಕ್ತ ಮಾಡಿದ ಮೊದಲ ರಾಜ್ಯ ಕರ್ನಾಟಕ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…

3 hours ago

ಬಿ.ಆರ್.ಟಿ ವಲಯದಲ್ಲಿ ಮತ್ತೆ ಕಾಡ್ಗಿಚ್ಚು : 20 ಎಕರೆ ಅರಣ್ಯ ನಾಶ

ಹನೂರು : ತಾಲೂಕಿನ ಬಿ.ಆರ್.ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸುಮಾರು 20 ಎಕರೆಗೂ…

4 hours ago