ವಿದ್ಯುತ್‌ ತಂತಿ ಸ್ಪರ್ಶಿಸಿ ಕೈ ಕಳೆದುಕೊಂಡ ಬಾಲಕ!

ಮಂಡ್ಯ: ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶಿಸಿದ ಪರಿಣಾಮ ಬಾಲಕ ಕೈ ಕಳೆದುಕೊಂಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಬೇವಿನಕುಪ್ಪೆಯಲ್ಲಿ ನಡೆದಿದೆ.

ಅಕ್ಷಯ್‌ ಕುಮಾರ್‌ (8) ಕೈ ಕಳೆದುಕೊಂಡ ಬಾಲಕ. ಆಟವಾಡುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶಿಸಿ ಬಾಲಕನ ಕೈಗೆ ಗಂಭೀರ ಗಾಯವಾಗಿತ್ತು. ಬಾಲಕನಿಗೆ ಚಿಕಿತ್ಸೆ ನೀಡಿದ ವೈದ್ಯರು ಆತನ ಕೈ ಕತ್ತರಿಸಿ ತೆಗೆದಿದ್ದಾರೆ.

ಬಾಲಕನ ಮನೆಯ ಮೇಲೆ ವಿದ್ಯುತ್‌ ತಂತಿ ಹಾದು ಹೋಗಿತ್ತು. ಅದನ್ನು ತೆಗೆಯುವಂತೆ ಬಾಲಕನ ಪೋಷಕರು ಚೆಸ್ಕಾಂನವರಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಿದ್ದರು. ಮನೆಯ ಮೇಲೆ ಬಾಲಕ ಆಟವಾಡುತ್ತಿದ್ದಾಗ ತಂತಿ ಸ್ಪರ್ಶದಿಂದ ಗಂಭೀರ ಗಾಯಗೊಂಡು ಈಗ ಕೈ ಕಳೆದುಕೊಂಡಿದ್ದಾನೆ. ಘಟನೆ ನಡೆದು ಒಂದು ವಾರವಾದರೂ ಪರಿಹಾರ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

× Chat with us