ಬಾಲಿವುಡ್‌ ನಟ ಬಿಕ್ರಮ್‌ಜೀತ್‌ ಕನ್ವರ್‌ಪಾಲ್‌ ಕೋವಿಡ್‌ನಿಂದ ಸಾವು

ಹೊಸದಿಲ್ಲಿ: ಬಾಲಿವುಡ್‌ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೋವಿಡ್‌ನಿಂದ ಶನಿವಾರ ಮೃತಪಟ್ಟಿದ್ದಾರೆ.

ಕನ್ವರ್‌ಪಾಲ್‌ ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಕೋವಿಡ್‌ ತಗುಲಿರುವುದು ದೃಢಪಟ್ಟಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಿಕ್ರಮ್​ಜೀತ್ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ನಂತರ 2003ರಲ್ಲಿ ನಟನೆ ಆರಂಭಿಸಿದರು. ಪೇಜ್​ 3, ರಾಕೆಟ್​ ಸಿಂಗ್​, ಆರಕ್ಷಕನ್​, ಮರ್ಡರ್​ 2, 2 ಸ್ಟೇಟ್ಸ್​, ಘಾಜಿ ಅಟ್ಯಾಕ್​, ರಹಸ್ಯ ಸೇರಿ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

× Chat with us