ರಾಹುಲ್‌ಗೆ ಟ್ವಿಟರ್ ಖಾತೆಯೂ ಬಂದ್ : ಬಿಜೆಪಿ ಲೇವಡಿ

ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಂದ್ ಆಗಿರುವ ಬಗ್ಗೆ ಲೇವಡಿ ಮಾಡಿರುವ ಬಿಜೆಪಿ, ಇದೊಂದರಲ್ಲಿ ಅವರು ಸಕ್ರಿಯವಾಗಿದ್ದರು. ಈಗ ಇದೂ ಕೂಡ ಇಲ್ಲದಂತಾಗಿದೆ . ಟ್ವಿಟರ್ ಸಹ ರಾಹುಲ್ ಅವರಿಗೆ ಹೊರಹೋಗಲು ಬಾಗಿಲು ತೋರಿಸಿದೆ ಎಂದು ಪರಿಹಾಸ್ಯ ಮಾಡಿದೆ.

ಬಿಜೆಪಿ ಸಂಸದ ಮತ್ತು ಪಕ್ಷದ ಯುವ ಘಟದ ಮಖ್ಯಸ್ಥ ತೇಜಸ್ವಿ ಸೂರ್ಯ, ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇವರ ಟ್ವಿಟರ್ ಪೋಸ್ಟ್‌ಗಳು ಅಸಭ್ಯ, ಅಕ್ರಮ ಮತ್ತು ಅಮಾನವೀಯ ಎಂದು ಟೀಕಿಸಿದ್ದಾರೆ.

ರಾಹುಲ್ ಟ್ವೀಟರ್‌ನಲ್ಲಿ ಮಾತ್ರ ಸಕ್ರಿಯವಾಗಿದ್ದರು. ದುರದೃಷ್ಟವಶಾತ್ ಈಗ ಅದೂ ಕೂಡ ರಾಹುಲ್ ಹೊರ ನಡೆಯಲು ದಾರಿ ತೋರಿಸಿದೆ ಎಂದು ಪರಿಹಾಸ್ಯ ಮಾಡಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಜೊತೆಗಿನ ಫೋಟೋದೊಂದಿಗೆ ರಾಹುಲ್ ಗಾಂಧಿ ಇತ್ತೀಚೆಗೆ ಮಾಡಿದ್ದ ಪೋಸ್ಟ್‌ನನ್ನು ಟ್ವಟಿರ್ ತನ್ನ ಅಂಕಣದಿಂದ ತೆಗೆದುಹಾಕಿ ನಂತರ ಅವರ ಖಾತೆಯನ್ನೂ ಸ್ಥಗಿತಗೊಳಿಸಿತ್ತು.

× Chat with us