ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಸಂತ್ರಸ್ತೆ ಅಪಹರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್‌ಡಿ ರೇವಣ್ಣ ಬಂಧನ ಸೇರಿದಂತೆ ಹಲವಾರು ಮಹತ್ವದ ವಿಚಾರಗಳ ಬಗ್ಗೆ ಇಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮಹತ್ವದ ಸುದ್ಧಿಗೋಷ್ಠಿ ನಡೆಸಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಎಸ್‌ಐಟಿ ಎಂಬುದು ಸ್ಪೆಷಲ್ ಇನ್ವೆಷ್ಟಿಗೇಶನ್ ಟೀಂ ಅಲ್ಲ, ಸಿದ್ದರಾಮಯ್ಯ ಇನ್ವೆಷ್ಟಿಗೇಶನ್ ಟೀಂ ಹಾಗೂ ಶಿವಕುಮಾರ್ ಇನ್ವೆಷ್ಟಿಗೇಶನ್ ಟೀಂ ಎಂಬುದಾಗಿದೆ. ಅವರಿಗೆ ಬೇಕಾದ ಮಾಹಿತಿ ಪಡೆಯಲು ಈ ತನಿಖಾ ತಂಡ ತೆರೆದಿದ್ದಾರೆ ಎಂದು ಆರೋಪಿಸಿದರು.
ತನಿಖೆ ಪಾರದರ್ಶಕವಾಗಿ ಮಾಡಿ ಪ್ರಜ್ವಲ್ ತನಿಖೆಗೆ ನನ್ನ ತಕರಾರಿಲ್ಲ. ಆದರೆ ತನಿಖೆ ಮಾಡುತ್ತಿರುವ ರೀತಿ ಮೇಲೆ ನಮಗೆ ಅನುಮಾನವಿದೆ. ಹೊಳೆ ನರಸೀಪುರದಲ್ಲಿ ಎಫ್‌ಐಆರ್ ದಾಖಲಾಗಿದೆ. ಮೊದಲ ದಿನ ಎಲ್ಲಾ ಜಾಮೀನು ಸಿಗುವ ಪ್ರಕರಣ ದಾಖಲಿಸಿ ಅದಾದ ನಂತರ, ಮರುದಿನ ಬೆಳಿಗ್ಗೆ ಗನ್ ಪಾಯಿಂಟ್ ಮೂಲಕ ಸಂತ್ರಸ್ತೆ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.
ಈ ಸರ್ಕಾರಕ್ಕೆ ಪ್ರಕರಣದ ಗೌಪತ್ಯ ಅಗತ್ಯವಿಲ್ಲ. ಹೆಣ್ಣು ಮಕ್ಕಳ ರಕ್ಷಣೆ ಬೇಕಾಗಿಲ್ಲ. ಅವರಿಗೆ ಬೇಕಿರುವುದು ಕೇವಲ ರಾಜಕೀಯವಾಗಿದೆ ಎಂದು ಎಚ್‌ಡಿಕೆ ಕಿಡಿಕಾರಿದರು.
ರೇವಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರೂ ರೇವಣ್ಣ ವಿರುದ್ಧ ದೂರು ದಾಖಲಿಸಿಲ್ಲ. ಆಗಿದ್ದರೂ ಅವರು ಸಂತ್ರಸ್ತೆಯನ್ನು ಹೇಗೆ ಕಂಡು ಹಿಡಿದಿರಿ? ಅವರಿಂದ ಹೇಗೆ ಪ್ರಕರಣ ದಾಖಲಿಸಿದ್ದೀರಿ? ಜಾಮೀನು ಪಡೆಯಲು ಬಂದವರನ್ನು ಬಂಧಿಸಿದ್ದೀರಿ. ಎರಡು ದಿನ ಆಗಿದ್ದರೂ ಜಡ್ಜ್ ಮುಂದೆ ಹಾಜರು ಪಡಿಸಿಲ್ಲ ಇದು ಪ್ರಕರಣ ದಿಕ್ಕು ತಪ್ಪಿಸುವ ಹಾದಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ರೇವಣ್ಣ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಹೇಳಿದ ಹಾಗೆ ಅವರು ಬರೆದುಕೊಡಬೇಕೇ? ಜವಾಬ್ದಾರಿ ಸ್ಥಾನದಲ್ಲಿರುವ ನೀವು, ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಪೆನ್‌ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ ಆಗಿದ್ದು, ಅವರನ್ನು ಈವರೆಗೆ ಯಾಕೆ ಎಸ್‌ಐಟಿ ಬಂಧಿಸಿಲ್ಲ. ನೀವು ನಿಜವಾಗಿ ಮಕ್ತವಾಗಿ ಕೆಲಸ ಮಾಡುತ್ತಿದ್ದರೇ ಯಾಕೆ ಈವರೆಗೆ ಅವನನ್ನು ಬಂಧಿಸಲಾಗಿಲ್ಲ. ಈ ತನಿಖೆಯನ್ನು ರೇವಣ್ಣ ಪ್ರಜ್ವಲ್ ಮೇಲೆ ಮಾಡುತ್ತೀದ್ದೀರೋ? ಇಲ್ಲ ಆಯೋಗದ ಅಧ್ಯಕ್ಷ ಮೇರೆಗೆ ತನಿಖೆ ನಡೆಸುತ್ತಿದೀರಾ ಅಥವಾ ಕಾರ್ತಿಕ್ ಒಳಗೊಂಡಂತೆ ಪಾರದರ್ಶಕ ತನಿಖೆಗೆ ಆದೇಶ ನೀಡಿದ್ದಾರೋ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ 14 ದಿನಗಳಿಂದ ಕೂಡಾ ಈ ಪ್ರಕರಣ ದಿಕ್ಕಿಲ್ಲದೇ ಓಡಾಡುತ್ತಿದೆ. ಐದು ಜನ ಮಹಿಳೆಯರ ಮಾನ ಹರಾಜು ಮಾಡಿ ರಾಜ್ಯದ ಮಾನ ಮರ್ಯಾದೆ ತೆಗೆದಿದ್ದೀರಿ. ಆದರೆ ನಾನು ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೂ ನಾವು ಯಾರನ್ನು ರಕ್ಷಣೆ ಮಾಡುವ ಕೆಲಸ ಮಾಡಿಲ್ಲ ಎಂದರು.
ಹಾಸನ ಜಿಲ್ಲಾಧಿಕಾರಿ ಶಿಶುಪಾಲ, ಕೃಷ್ಣ ಕಥೆ ಹೇಳಿದ್ದಾರೆ. ನಿಮ್ಮ ಕೋಲಾರದ ಕಥೆ ತಿಳಿದಿದೆ. ನಿಮ್ಮ ಸಹಾಯವಾಣಿಯಲ್ಲಿ ಈ ವರೆಗೆ ಪ್ರಕರಣ ದಾಖಲಾಗಿದೆಯೇ? ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಸಹಾಯವಾಣಿ ತೆರೆದಿದ್ದು ಯಾರಿಗಾಗಿ ಈವರೆಗೆ 2800 ಪ್ರಕರಣದಲ್ಲಿ ಎಷ್ಟು ಪ್ರಕರಣ ದಾಖಲಾಗಿದೆ ಎಂದು ಪ್ರಶ್ನೆ ಮಾಡಿದರು.
ಪ್ರಜ್ವಲ್ ಪ್ರಕರಣದಲ್ಲಿ ಅಪ್ರಾಪ್ತರಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ, ರಾಹುಲ್ ಗಾಂಧಿ ಮಹಾನ್ ಬಾವ, ಸಿಎಂ ಅವರೇ ನಿಮ್ಮ ಮುಂದಿನ ಪ್ರಧಾನ ಮಂತ್ರಿ ರಾಗಾ ಈ ಹೇಳಿಕೆಯನ್ನು ಯಾವಾ ಆಧಾರದಲ್ಲಿ ನೀಡಿದ್ದಾರೆ. ಎಸ್‌ಐಟಿ ಯಾಕೆ ಅವರನ್ನ ಇನ್ನು ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಜ್ವಲ್ ಮುಗಿಸಲು ಪೋಕ್ಸೋ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. 400 ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಎಸ್‌ಐಟಿ ಯಾಕೆ ಇನ್ನು ದೂರು ದಾಖಲಿಸಿಕೊಂಡಿಲ್ಲ, ಅವರನ್ನು ಏಕೆ ತನಿಖೆ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ. ಈ
ಪ್ರಕರಣದಲ್ಲಿ ಅಮಿತ್ ಶಾ ಮೋದಿ ಅವರನ್ನು ಎಳೆದು ತಂದಿರುವುದು. ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿರುವುದು ಸರಿಯಲ್ಲ. ಇಂದು ಈ ವಿಚಾರದ ಬಗ್ಗೆ ಪ್ರಧಾನಿ ಅವರು ಮಾತನಾಡಿದ್ದು, ಈ ವಿಚಾರದಲ್ಲಿ ಯಾರೇ ತಪ್ಪಿತಸ್ಥರಿದ್ದರೂ, ಅದು ಪ್ರಜ್ವಲ್ ರೇವಣ್ಣ ಆಗಿದ್ದರೂ ಸಾಫ್ಟ್ ಕಾರ್ನರ್ ತೋರಿಸುವುದಿಲ್ಲ ಎಂದು ಹೇಳಿದ್ದಾರೆ ಎಂದರು.
ಸುರ್ಜೆವಾಲಾ ಅವರು ಸಂತ್ರಸ್ತೆಯರಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಯಾವ ಮಹಿಳೆಯರ ವೀಡಿಯೋ, ಫೋಟೋ ಹೊರಗ ಬಿಡಬೇಕು ಎಂಬುದನ್ನು ಟಿಕ್ ಮಾಡಿದ್ದು ಯಾರು? ಸರ್ಕಾರದಿಂದ ಆರ್ಥಿಕ ಪರಿಹಾರ ಘೋಷಣೆ ಮಾಡಲು ನೀವು ಯಾರು? ಸರ್ಕಾರ ಅವರ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ವಿವೇಕ್ ಸುಬ್ಬಾರೆಡ್ಡಿ, ಅವರ ಹೇಳಿಕೆಯಂತೆ ಸಿಟ್ಟಿಂಗ್ ನ್ಯಾಯಾಧೀಶರ ಅಧೀನದಲ್ಲಿ ವಿಚಾರವನ್ನು ತನಿಖೆಗೆ ನೀಡಿ. ಪೆನ್‌ಡ್ರೈವ್ ಮಾನಹಾನಿಗೆ ಡಿಕೆ ಶಿವಕುಮಾರ್ ಕೈವಾಡವಿದೆ. ಅವರನು ಕ್ಯಾಬಿನೆಟ್‌ನಿಂದ ಅಮಾನತುಗೊಳಿಸಬೇಕು. ಈ ಪ್ರಕರಣವನ್ನು ಮುಚ್ಚಿಹಾಕಲು ನಾವು ಬಿಡುವುದಿಲ್ಲ. ಈ ತಪ್ಪಿಗೆ ತಲೆದಂಡ ಆಗಲೇಬೆಕು. ಎಸ್‌ಐಟಿ ಸಿಎಂ ಡಿಸಿಎಂ ಗಳ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದು, ಪಾರದರ್ಶಕ ತನಿಖೆ ಅತ್ಯಗತ್ಯವಿದೆ ಎಂದು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
ಇನ್ನು ನಮ್ಮ ಕುಟುಂಬದ ಮೇಲೆ ಅಪರಾಧ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ನಿಮ್ಮ ಸರ್ಕಾರದಿಂದ ನಮಗೆ ನ್ಯಾಯ ಸಿಗಲಿದೆಯಾ. ದೇವೆಗೌಡರ ಬಗ್ಗೆ ಅವಹೇಳನ ಮಾತುಗಳನ್ನು ಸಿಎಂ ಆಡಿದ್ದಾರೆ. ನಿಮಗೆ ತಂದೆ ತಾಯಿ ಸಂಬಂಧದ ಅತ್ಮೀಯತೆ ಇಲ್ಲದೇ ಇರಬಹುದು. ಆದರೆ, ನಮಗೆ ತಂದೆ ತಾಯಿ ಆರೋಗ್ಯ ಮುಖ್ಯವಾಗಿದೆ. ಅದು ದೇವೇಗೌಡರ ನಿವಾಸ ಅಲ್ಲ, ಮಗಳ ಮನೆಯಾಗಿದೆ. ದಯವಿಟ್ಟು ನೀವು ದೇವೇಗೌಡ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಹೇಳಿದರು.
ಗ್ಯಾರೆಂಟಿ ಯೋಜೆನಗಳು ಕೈಹಿಡಿಯದ ಹಿನ್ನಲೆ ಈ ವಿಚಾರವನ್ನು ಕಾಂಗ್ರೆಸ್ ಮುನ್ನಲೆಗೆ ತಂದಿದೆ. ಈ ವಿಚಾರದಿಂದ ರಾಜ್ಯ ದೇಶ ಗೊಂದಲಕ್ಕೆ ಒಳಗಾಗಿದೆ. ಈವರೆಗೆ ಎಷ್ಟು ಪ್ರಕರಣ ಹೊರಗೆ ತಂದಿದ್ದೀರಿ. ನಿಮ್ಮ ಕಾರ್ಯವೈಖರಿಯೇನು? ಎಂದು ಎಚ್‌ಡಿ ಕುಮಾರಸ್ವಾಮಿ ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…