ಅಣ್ಣಾಮಲೈ ಬಿಜೆಪಿ ಸೇರಿದ ನಂತರ ಮೈಸೂರಿಗೆ ಮೊದಲ ಭೇಟಿ

ಮೈಸೂರು: ಪೊಲೀಸ್‌ ಇಲಾಖೆಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿದ ನಂತರ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಇದೇ ಮೊದಲ ಬಾರಿಗೆ ಮೈಸೂರಿಗೆ ಶನಿವಾರ ಭೇಟಿ ನೀಡಿದರು. ಅವರನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದ ದೃಶ್ಯ ಕಂಡುಬಂತು.

ನಗರದ ಶರದಾವಿಲಾಸ ಶತಮಾನೋತ್ಸವ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ʻಬೆಂಕಿಯ ಚೆಂಡು ಕುಯಿಲಿʼ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಣ್ಣಾಮಲೈ ಪಾಲ್ಗೊಂಡಿದ್ದಾರೆ. ಈ ವೇಳೆ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾರಂಭದಲ್ಲಿ ಜಮಾಯಿಸಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ ʻಸಿಂಗಂʼ ಎಂದು ಅಣ್ಣಾಮಲೈ ಖ್ಯಾತಿ ಗಳಿಸಿದ್ದರು. ಬದಲಾದ ಸನ್ನಿವೇಶದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದರು.

× Chat with us