ಬೆಂಗಳೂರು : ಹಿಂದಿನ ಸರ್ಕಾರದ ಆಡಳಿತಗಾರರಿಗೆ, ಅಧಿಕಾರಿಗಳ ಕೊರಳಿಗೆ ಉರುಳಾಗಲಿದೆ ಎಂದು ಭಾವಿಸಲಾದ ಬಿಟ್‍ಕಾಯಿನ್ ಹಗರಣದಲ್ಲಿ ವಿಶೇಷ ತನಿಖಾ ದಳ ಬೆಂಗಳೂರಿನ ನಾಲ್ಕು ಕಡೆ ಮನೆ ಶೋಧ ಕಾರ್ಯಾಚರಣೆ ನಡೆಸಿದೆ.
ಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಗೆ ಸೇರಿದ ಜಯನಗರದ ನಿವಾಸ, ಶ್ರೀಕಿಗೆ ನೆರವಾದ ಆರೋಪಕ್ಕೆ ಗುರಿಯಾಗಿರುವ ಸುನೀಶ್ ಹೆಗ್ಡೆ ಅವರ ಸಂಜಯ ನಗರ ನಿವಾಸ, ಪ್ರಸಿದ್ಧ್ ಅವರ ಸದಾಶಿವ ನಗರ ನಿವಾಸ ಮತ್ತು ಸಂಬಂಕರೊಬ್ಬರ ಮನೆಯ ಮೇಲೆ ದಾಳಿಗಳಾಗಿವೆ.
ನ್ಯಾಯಾಲಯದಿಂದ ವಾರಂಟ್ ಪಡೆದು ಇಂದು ಮುಂಜಾನೆ 6 ಗಂಟೆಯಿಂದಲೇ ಶೋಧ ಕಾರ್ಯಾಚರಣೆ ನಡೆಸಲಾಗಿದೆ. 2020 ರಲ್ಲಿ ವರದಿಯಾಗಿದ್ದ ಬಿಟ್‍ಕಾಯಿನ್ ಹಗರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮರುತನಿಖೆಗೆ ಆದೇಶಿಸಿದ್ದು, ವಿಶೇಷ ತನಿಖಾ ದಳ ರಚಿಸಿದೆ.
ತನಿಖಾ ದಳ ಈಗಾಗಲೇ ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸುತ್ತಿದೆ. ಅತ್ಯುನ್ನತವಾದ ತಂತ್ರಜ್ಞಾನ ಆಧಾರಿತ ಹೈ ಪ್ರೊಫೈಲ್ ಪ್ರಕರಣವಾಗಿರುವ ಬಿಟ್‍ಕಾಯಿನ್‍ನಲ್ಲಿ ಸಾಕ್ಷ್ಯ ಸಂಗ್ರಹಿಸುವುದು ಕಷ್ಟದ ಕೆಲಸವಾಗಿದ್ದು, ತನಿಖಾ ದಳ ಈ ನಿಟ್ಟಿನಲ್ಲಿ ಹಗಲೂ ರಾತ್ರಿ ಬೆನ್ನು ಬಿದ್ದಿದೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಂದಲೂ ಹೇಳಿಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ಮೂವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸುವ ಪ್ರಯತ್ನ ನಡೆಸಿದೆ.
ಮೈಸೂರು : ಸಾಂಸ್ಕ ತಿಕ ನಗರಿಯ ಜನತೆಯ ಅನುಕೂಲಕ್ಕಾಗಿ ಮೈಸೂರಿನಿಂದ ಮುತ್ತಿನ ನಗರಿ ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಚಾರ ಅತಿ…
ನವದೆಹಲಿ : ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ (Women’s Reservation Bill) ಭಾರೀ…
ಟೆಹ್ರಾರ್ : ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣ ಮುಕ್ತಿ ನೀಡಿದೆ ಎಂದು ಮಹತ್ವದ ಘೋಷಣೆ ಮಾಡಿದೆ.…
ಹನೂರು : ಕುಡಿಯುವ ನೀರು, ಇ-ಸ್ವತ್ತು, ಪೋಡಿ ಹಾಗೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ…
ಮೈಸೂರು : ನಗರದಲ್ಲಿರುವ ರೈಲ್ವೇ ಗೂಡ್ಸ್ ಶೆಡನ್ನು ಪಾಂಡವಪುರಕ್ಕೆ ಸ್ಥಳಾಂತರಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರು ಹುನ್ನಾರ…
ಕಾನೂನು ಸಚಿವಾಲಯದಿಂದ ಅಧಿಸೂಚನೆ ಪ್ರಕಟ ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಒದಗಿಸುವ ಮಹಿಳಾ ಮೀಸಲಾತಿ…