ಪಾತಾಳದಲ್ಲಿ ಅಡಗಿದ್ದರೂ ಹುಡುಕಿ ಕೊಲ್ಲುತ್ತೇವೆ: ಉಗ್ರರಿಗೆ ಬೈಡನ್ ಸ್ಪಷ್ಟ ಸಂದೇಶ

ವಾಷಿಂಗ್ಟನ್: ಕಾಬೂಲ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಅಮೆರಿಕ ಯೋಧರನ್ನು ಹತ್ಯೆ ಮಾಡಿರುವ ಭಯೋತ್ಪಾದಕರ ವಿಧ್ವಂಸಕ ಕೃತ್ಯದ ಬಗ್ಗೆ ಕೆಂಡಾಮಂಡಲವಾಗಿರುವ ಅಧ್ಯಕ್ಷ ಜೋ ಬೈಡನ್ ಪ್ರತೀಕಾರದ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ನಮ್ಮ ತಂಟೆಗೆ ಬಂದು ನೀವು ತಪ್ಪು ಮಾಡಿದಿರಿ. ಇದಕ್ಕೆ ನೀವು ತಕ್ಕ ಪಾಠ ಕಲಿಯುವಿರಿ. ನೀವು ಎಲ್ಲೆ ಹೋಗಿ ಅಡಗಿ ಕುಳಿತರೂ ನಿಮ್ಮನ್ನು ಹುಡುಕಿ ಕೊಲ್ಲುವುದು ನಮಗೆ ಗೊತ್ತಿದೆ ಎಂದು ಅಮೆರಿಕ ರಾಷ್ಟ್ರಾಧ್ಯಕ್ಷರು ಉಗ್ರರಿಗೆ ದಿಟ್ಟ ಮಾತುಗಳಲ್ಲಿ ಹೇಳಿದ್ದಾರೆ.

ಶ್ವೇತಭವನದಲ್ಲಿ ತುರ್ತು ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನಿಮ್ಮ ದುಷ್ಕೃತ್ಯವನ್ನು ಎಂದಿಗೂ ಮರೆಯುವುದಿಲ್ಲ. ನೀವು ಪಾತಾಳದಲ್ಲಿ ಅವಿತಿಟ್ಟುಕೊಂಡಿದ್ದರೂ ಹೆಕ್ಕಿ ಹೆಕ್ಕಿ ತೆಗೆದು ಬೇಟೆಯಾಡುತ್ತೇವೆ ಎಂದು ಪ್ರತಿದಾಳಿಯ ಖಚಿತ ಸುಳಿವು ನೀಡಿದ್ದಾರೆ.

× Chat with us