BREAKING NEWS

ಭವಾನಿ ರೇವಣ್ಣ ಕಾರು ಅಪಘಾತ : ನನ್ನ ತಾಯಿಯ ತಪ್ಪೇನು ಇಲ್ಲ ಎಂದ ಸೂರಜ್‌ ರೇವಣ್ಣ

ಬೆಳಗಾವಿ : ಭವಾನಿ ರೇವಣ್ಣ ಅವರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೂರಜ್‌ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಇದರಲ್ಲಿ ನನ್ನ ತಾಯಿಯ ತಪ್ಪೇನಿಲ್ಲ ಬೈಕ್ ಸವಾರ ಕುಡಿದು ಬೈಕ್‌ ಚಲಾಯಿಸುತ್ತಿದ್ದ. ಕಾರು ಅಪಘಾತವಾಗಿದ್ದಕ್ಕೆ ಸಹಜವಾಗಿಯೇ ನನ್ನ ತಾಯಿ ಆ ರೀತಿ ಮಾತನಾಡಿದ್ದಾರೆ. ಅವರು ಆ ರೀತಿಯ ಬದಗಳನ್ನು ಬಳಸಿರುವುದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಅಪಘಾತ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿಕೊಂಡು ವೈರಲ್‌ ಮಾಡಿದ್ದಾರೆ ಎಂದಿದ್ದಾರೆ.

ನೆನ್ನೆ ಕೆಆರ್‌ ನಗರದ ಸಾಲಿಗ್ರಾಮದಿಂದ ಹೊಳೆ ನರಸಿಪುರದ ಕಡೆಗೆ ಹೊರಟಿದ್ದ ವೇಳೆ ರಾಮಪುರ ಗೇಟ್‌ ಬಳಿ ಭವಾನಿ ರೇವಣ್ಣ ಅವರ ಕಾರಿಗೆ ಎದುರಿನಿಂದ ಬಂದ ಬೈಕ್‌ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರಿನ ಮುಂಭಾಗ ಸ್ವಲ್ಪ ಸ್ಕ್ಯಾಚ್‌ ಆಗಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಬೈಕ್‌ ಸವಾರನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಸಾಯುವ ಹಾಗಿದ್ದರೆ ಬಸ್ಸಿಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನೀನು ಸಾಯೋಕೆ ನನ್ನ ಕಾರೇ ಬೇಕಿತ್ತಾ ? ಡ್ಯಾಮೆಜ್‌ ಮಾಡೋಕೆ ನೀನ್ಯಾವೊನು. ಅವನು ಸತ್ರೆ ಸಾಯಲಿ. ನನ್ನ ಗಾಡಿ ಯಾರು ರಿಪೇರಿ ಮಾಡಿಸಿಕೊಡ್ತಾರೆ. ಈಗ ರಿಪೇರಿ ಮಾಡಿಸೋಕೆ ಐವತ್ತು ಲಕ್ಷ ಬೇಕು. ಒಂದುವರೆ ಕೋಟಿ ರೂಪಯಿಯ ಕಾರು ನನ್ನದು, ಅವನ ಗಾಡಿ ಸುಟ್ಟುಹಾಕಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು.

ಈ ವೇಳೆ ಸ್ಥಳದಲ್ಲಿದ್ದವರು ಅಕ್ಕ ಗಾಡಿ ತೆಗೀರಿ ಹೋಗೋಣ ಎಂದಿದ್ದಾರೆ. ಇದಕ್ಕೆ ಭವಾನಿ ರೇವಣ್ಣ ಅವರು ಗಾಡಿ ತಗೊಂಡು ಏನ್‌ ಮಾಡೋಣ ರೀಪೇರಿ ಮಾಡೋಕೆ ಐವತ್ತು ಲಕ್ಷ ಬೇಕು ಕೊಡ್ತೀಯಾ ನೀನು ? ದುಡ್ಡು ಕೊಡುವ ಹಾಗಿದ್ದರೆ ನ್ಯಾನ ಮಾಡೋಕೆ ಬನ್ನಿ ಎಂದು ಸಂಯಮ ಮೀರಿ ಮಾತನಾಡಿದ್ದರು.

lokesh

Recent Posts

ಮಾತುಕತೆ ನಡೆಸುವ ಉದ್ದೇಶ ನಮಗಿಲ್ಲ : ಇರಾನ್‌

ಟೆಹ್ರಾನ್ : ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ನಮಗಿಲ್ಲ ಇಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ…

2 mins ago

ಓದುಗರ ಪತ್ರ | ಚಲನ ಚಿತ್ರದ ಅಶ್ಲೀಲ ಸಾಹಿತ್ಯ ನಿಷೇಧಿಸಿ

ಕನ್ನಡ ಚಲನಚಿತ್ರಗಳು ಭಾರತೀಯ ಸಿನಿರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಎಪ್ಪತ್ತು, ಎಂಬತ್ತರ ದಶಕದಲ್ಲಿ ತೆರೆ ಕಂಡ ಚಿತ್ರಗಳ ಹಾಡುಗಳು…

56 mins ago

ಓದುಗರ ಪತ್ರ | ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಿ

ಸರಗೂರು ಹಾಗೂ ಎಚ್‌.ಡಿ.ಕೋಟೆಯಿಂದ ಗುಂಡ್ಲುಪೇಟೆಗೆ ಪ್ರತಿನಿತ್ಯ ನೂರಾರು ಜನರು ಪ್ರಯಾಣಿಸುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳು ಸರಿಯಾದ ಸಮಯಕೆ…

1 hour ago

ಓದುಗರ ಪತ್ರ | ಕೆರೆಗಳ ಉಳಿವಿಗೆ ಜಿಯೋ ಫೆನ್ಸಿಂಗ್ ಕಡ್ಡಾಯಗೊಳಿಸಿ

ರಾಜ್ಯದ ಜಲಮೂಲಗಳ ಸ್ಥಿತಿ ಇಂದು ಶೋಚನೀಯವಾಗಿದೆ. ಅಂಕಿ-ಅಂಶಗಳ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಅತಿಕ್ರಮಣದಿಂದಾಗಿ ನಗರ ಪ್ರದೇಶದ ಕೆರೆಗಳ ವಿಸ್ತೀರ್ಣ…

1 hour ago

ಓದುಗರ ಪತ್ರ | ನೀರು ಪೋಲು ಮಾಡದಂತೆ ಜಾಗೃತಿ ಮೂಡಿಸಿ

ಬೇಸಿಗೆಯ ತಾಪ ಹೆಚ್ಚಾದಂತೆ ರಾಜ್ಯದ ಹಲವೆಡೆ ಜನರು ಒಂದು ಬಿಂದಿಗೆ ನೀರಿಗಾಗಿ ವಾರಗಟ್ಟಲೆ ಕಾಯುವ ಪರಿಸ್ಥಿತಿ ಇದೆ. ಹೀಗಿರುವಾಗ, ಮೈಸೂರು…

1 hour ago

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ರಾಜೀನಾಮೆಗೆ ಬಿಗಿಪಟ್ಟು • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ತಾಲ್ಲೂಕು ವೀರಶೈವ ಲಿಂಗಾಯತ ಮಹಾ…

1 hour ago