ಹಾಸನ ಸೇರಿದಂತೆ ರಾಜ್ಯದ 3 ನಗರಗಳಲ್ಲಿ ಉತ್ತಮ ವಾಯು ಗುಣಮಟ್ಟ ಸೂಚ್ಯಂಕ ದಾಖಾಗಿದೆ

ದೆಹಲಿ: ರಾಜ್ಯದ 3 ನಗರಗಳಲ್ಲಿ ಉತ್ತಮ ವಾಯು ಗುಣಮಟ್ಟ ಸೂಚ್ಯಂಕ ದಾಖಾಗಿದೆ. ಇಂದು (ನವೆಂಬರ್ 23) ಬೆಳಿಗ್ಗೆ ಹಾಸನ, ಚಿಕ್ಕಬಳ್ಳಾಪುರ, ಯಾದಗಿರಿ ನಗರಗಳಲ್ಲಿ ಉತ್ತಮ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಹಾಸನ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 20 ಮಾತ್ರ ದಾಖಲಾಗಿದೆ. ಹೀಗಾಗಿ ಉತ್ತಮವಾದ ಗಾಳಿಯ ಗುಣಮಟ್ಟವನ್ನು ಹಾಸನ ಹೊಂದಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 28 ದಾಖಲು, ಇನ್ನು ಯಾದಗಿರಿ‌ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 30 ದಾಖಲಾಗಿದೆ. ಮಾಲಿನ್ಯ ರಹಿತವಾದ ಉತ್ತಮವಾದ ಗಾಳಿಯ ಗುಣಮಟ್ಟ ರಾಜ್ಯದ 3 ಜಿಲ್ಲೆಗಳಲ್ಲಿ ದಾಖಲಾಗಿದೆ.

ಹಾಸನ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 20 ಮಾತ್ರ ದಾಖಲಾಗಿದೆ. ಹೀಗಾಗಿ ಉತ್ತಮವಾದ ಗಾಳಿಯ ಗುಣಮಟ್ಟವನ್ನು ಹಾಸನ ಹೊಂದಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 28 ದಾಖಲು, ಇನ್ನು ಯಾದಗಿರಿ‌ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 30 ದಾಖಲಾಗಿದೆ.

ಇದಕ್ಕೆ ವಿರುದ್ಧವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ದಾಖಲಾಗಿದೆ. ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಕುಸಿದಿದೆ. ದೆಹಲಿಯ ಜಂಗೀರಪುರ‌ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 324 ಕ್ಕೆ ಕುಸಿತವಾಗಿದೆ. ಆದರೆ ನೆನ್ನೆ (ನವೆಂಬರ್ 22) ಮತ್ತು ಭಾನುವಾರಕ್ಕೆ ಹೋಲಿಸಿದರೆ ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಸ್ವಲ್ಪ ಉತ್ತಮವಾಗಿದೆ. ನೆನ್ನೆ ದೆಹಲಿ ವಾಯುವಿನ ಗುಣಮಟ್ಟ 349 ಕ್ಕೆ ಕುಸಿದಿತ್ತು. ಸದ್ಯ ದೆಹಲಿಯಲ್ಲಿ ಬಿರುಸಾದ ಗಾಳಿಯ ವೇಗ ಇದೆ. ಹೀಗಾಗಿ ವಾಯುವಿನ ಗುಣಮಟ್ಟ ಸ್ವಲ್ಪ ಉತ್ತಮವಾಗಿದೆ.

× Chat with us