BREAKING NEWS

ನಿಯಮ ಉಲ್ಲಂಘಿಸಿದ ಟ್ವೀಟ್‌ಗಳಿಗೆ ನಿರ್ಬಂಧ: ಟ್ವಿಟರ್‌

ನವದೆಹಲಿ: ‘ಸಾಮಾಜಿಕ ಜಾಲತಾಣ ಟ್ವಿಟರ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸುತ್ತದೆ. ಆದರೆ, ಬೇಕಾಬಿಟ್ಟಿಯಾಗಿ ಮಾಡಿದ ಟ್ವೀಟ್‌ಗಳೆಲ್ಲವೂ ಮುಕ್ತವಾಗಿ ಬಳಕೆದಾರರನ್ನು ಇನ್ನುಮುಂದೆ ತಲುಪಲು ಅವಕಾಶವಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಟ್ವೀಟ್‌ಗಳು ಟ್ವಿಟರ್‌ ತಾಣದಲ್ಲಿ ಗೋಚರಿಸದಂತೆ ನಿರ್ಬಂಧಿಸಲಾಗುತ್ತದೆ’ ಎಂದು ಕಂಪನಿಯು ತನ್ನ ಪರಿಷ್ಕೃತ ನೀತಿಯಲ್ಲಿ ಹೇಳಿದೆ.

ಆರಂಭದಲ್ಲಿ ದ್ವೇಷಪೂರಿತ ನಡವಳಿಕೆಯಂಥ ನಿಯಮಗಳ ಉಲ್ಲಂಘನೆಯ ಟ್ವೀಟ್‌ಗಳಿಗೆ ವಿಜಿಬಿಲಿಟಿ ಫಿಲ್ಟರ್‌ (ಗೋಚರ ಸೋಸುಕ) ಅಳವಡಿಸಿ, ನಂತರ ಅದನ್ನು ಇತರ ಡೊಮೇನ್‌ಗಳಿಗೂ ವಿಸ್ತರಿಸಲಿದೆ. ಟ್ವಿಟರ್ ಬಳಕೆದಾರರಿಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಸೆನ್ಸಾರ್‌ಶಿಪ್‌ ಭಯವಿಲ್ಲದೆ ವ್ಯಕ್ತಪಡಿಸುವ ಹಕ್ಕಿದೆ ಎಂದು ಸಂಸ್ಥೆ ತಿಳಿಸಿದೆ.

‘ನಿಯಮಗಳನ್ನು ಉಲ್ಲಂಘಿಸುವ ವಿಷಯದಿಂದ ಬಳಕೆದಾರರನ್ನು ನಮ್ಮ ಜಾಲತಾಣದಲ್ಲಿ ಸುರಕ್ಷಿತವಾಗಿರಿಸುವುದು ನಮ್ಮ ಜವಾಬ್ದಾರಿ ಮತ್ತು ನಂಬಿಕೆ. ಈ ನಂಬಿಕೆಗಳು ವಾಕ್ ಸ್ವಾತಂತ್ರ್ಯದ ಅಡಿಪಾಯವಾಗಿದೆ. ಹಾಗಂಥ, ನಿಯಮ ಉಲ್ಲಂಘಿಸಿದ ಟ್ವೀಟ್‌ಗಳಿಗೆ ಮುಕ್ತವಾಗಿ ಬಳಕೆದಾರರನ್ನು ತಲುಪುವ ಸ್ವಾತಂತ್ರ್ಯವಿದೆ ಎಂದಲ್ಲ. ನಮ್ಮ ನೀತಿಗಳನ್ನು ಉಲ್ಲಂಘಿಸುವ ಟ್ವೀಟ್‌ಗಳು ಗೋಚರಿಸದಂತೆ, ಅವು ತಲುಪುವ ವ್ಯಾಪ್ತಿಯನ್ನು ನಿರ್ಬಂಧಿಸುವುದು ನಮ್ಮ ತತ್ವಾದರ್ಶವಾಗಿದೆ’ ಎಂದು ಸಂಸ್ಥೆ ಹೇಳಿದೆ.

andolanait

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

7 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

9 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

9 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

13 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

18 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

18 hours ago